ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

LK   ¦    Oct 17, 2020 07:50:44 PM (IST)
ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಕೊಳ್ಳೇಗಾಲ: ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಒಣ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹನೂರು ತಾಲ್ಲೂಕಿನ ಸೂಳೆಕೂಬೆ ಗ್ರಾಮದ ಸಿದ್ದಮರಿ ಅಲಿಯಾಸ್ ಭಂಗಿಸಿದ್ದ ಬಂಧಿತ ಆರೋಪಿ. ಸುಮಾರು 530 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಈತನು ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಬಕಾರಿ ಉಪ ಆಯುಕ್ತರು ಹಾಗೂ ಉಪಾಧೀಕ್ಷಕರು ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕಿ ಮೀನಾ ಹಾಗೂ  ಉಪನಿರೀಕ್ಷಕ ತನ್ವೀರ್ ನೇತತ್ವದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ಒಣ ಗಾಂಜಾವನ್ನು ವಶಪಡಿಸಿಕೊಂಡರು.

ಈ ಸಂಬಂಧ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ದಾಳಿಯಲ್ಲಿ ಅಬಕಾರಿ ರಕ್ಷಕರಾದ ಕೆ.ಪ್ರದೀಪ್ ಕುಮಾರ್, ರಮೇಶ್, ಸುಂದ್ರಪ್ಪ, ಜಯಪ್ರಕಾಶ್, ಸುಜನರಾಜ್, ಸಿದ್ದಯ್ಯ, ಮಂಜುಪ್ರಸಾದ್ ಇದ್ದರು.