ಮಂಜೇಶ್ವರ ವಿಧಾನಸಭೆ ಉಪಚುನಾವಣೆ: ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

ಮಂಜೇಶ್ವರ ವಿಧಾನಸಭೆ ಉಪಚುನಾವಣೆ: ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

SK   ¦    Oct 22, 2019 01:49:01 PM (IST)
ಮಂಜೇಶ್ವರ ವಿಧಾನಸಭೆ ಉಪಚುನಾವಣೆ: ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

ಕಾಸರಗೋಡು: ಮಂಜೇಶ್ವರ  ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.

ಮತಯಂತ್ರಗಳನ್ನು ನಿನ್ನೆ ರಾತ್ರಿ ಪೊಲೀಸ್  ಭದ್ರತೆಯಲ್ಲಿ ಮತಎಣಿಕಾ ಕೇಂದ್ರವಾದ ಪೈವಳಿಕೆ ನಗರ ಶಾಲೆಗೆ ತರಲಾಗಿದ್ದು, ಬಿಗು ಭದ್ರತೆ ಏರ್ಪಡಿಸಲಾಗಿದೆ. ಎಂಟು ಗಂಟೆ ತನಕ ಹಲವು ಮತಗಟ್ಟೆಗಳಲ್ಲಿ ಮತದಾನ ಮುಂದುವರಿಯಿತು.

ಶೇಕಡಾ 75.78  ಶೇಕಡಾ ಮತದಾನವಾಗಿದೆ. 2016 ರಲ್ಲಿ  76. 19 ಶೇಕಡಾ ಮತದಾನವಾಗಿತ್ತು.

24 ರಂದು ಮತದಾನ ನಡೆಯಲಿದ್ದು , ಮಧ್ಯಾಹ್ನದೊಳಗೆ ಫಲಿತಾಂಶ ಹೊರಬೀಳಲಿದೆ