ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಬೀದಿ ನಾಯಿ

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಬೀದಿ ನಾಯಿ

YK   ¦    Jul 11, 2019 03:25:57 PM (IST)
ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಬೀದಿ ನಾಯಿ

ಹಾಸನ: ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಯೊಂದು ಬಾಲಕನಿಗೆ ಕಚ್ಚಿದ ಘಟನೆ ಬುಧವಾರ ಸಂಜೆ ನಡೆದಿದೆ.

ನಾಯಿ ದಾಳಿಗೆ ಬಾಲಕನ ತುಟಿ ಹಾಗೂ ಕೆನ್ನೆ ಕಚ್ಚಿದೆ. ಇದರಿಂದ ಗಾಬರಿಗೊಂಡ ಸ್ಥಳೀಯರು ನಾಯಿಯನ್ನು ಅಲ್ಲಿಂದ ಓಡಿಸಿದ್ದಾರೆ.ನಾಯಿ ದಾಳಿಗೆ ಒಳಗಾದ ಬಾಲಕನನ್ನು ಸುಭಾಷ್ ನಗರದ ರಿಜ್ವಾನ್ ಅವರ ಪುತ್ರ ಉಸ್ಮಾನ್ ಎಂದು ಗುರುತಿಸಲಾಗಿದೆ.

ಬಾಲಕನನ್ನು ಮತ್ತೇ ಆಸ್ಪತ್ರೆಗೆ ದಾಖಲಿಸಲಾಯಿತು.