ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ತಲೆಬುರುಡೆ ಪತ್ತೆ

ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ತಲೆಬುರುಡೆ ಪತ್ತೆ

SK   ¦    Oct 22, 2019 06:42:22 PM (IST)
ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ತಲೆಬುರುಡೆ ಪತ್ತೆ

ಕಾಸರಗೋಡು: ಒಂದು ವರ್ಷದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ  ದೇಲಂಪಾಡಿಯ ವ್ಯಕ್ತಿಯೋರ್ವನ ತಲೆ ಬುರುಡೆ ಅರಣ್ಯದಲ್ಲಿ ಪತ್ತೆಯಾದ ಘಟನೆ ನಡೆದಿದೆ.

ದೇಲಂಪಾಡಿ ನೂಜಿಬೆಟ್ಟು ವಿನ  ಶಶಿಧರ (35) ನಾಪತ್ತೆಯಾಗಿದ್ದವರು . 2018ರಲ್ಲಿ ಶಶಿಧರ ನಾಪತ್ತೆಯಾಗಿದ್ದರು . ಸಂಬಂಧಿಕರು ದೂರು ನೀಡಿದ್ದರು. ಆದರೆ ಆದೂರು  ಪೊಲೀಸರು ತನಿಖೆ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ .  2019 ರ  ಮೇ ತಿಂಗಳಲ್ಲಿ ದೇಲಂಪಾಡಿ  ರಕ್ಷಿತಾರಣ್ಯದಲ್ಲಿ  ದೇಹದ ಅವಶೇಷಗಳು ನತ್ತು ವಸ್ತ್ರ  ಪತ್ತೆಯಾಗಿದ್ದವು. ಆದರೆ ಈ ಬಗ್ಗೆ ಖಚಿತ ಪಡಿಸಲುಅವಶೇಷಗಳನ್ನು  ಫಾರೆನ್ಸಿಕ್ ತಪಾಸಣೆಗೆ ಕಳುಹಿಸಲಾಗಿತ್ತು . ತಪಾಸಣೆಯಿಂದ  ಶಶಿಧರರ ಅವಶೇಷಗಳು ಎಂದು ಖಚಿತಗೊಂಡಿತ್ತು. ಇದಾದ ಬಳಿಕ ಸೋಮವಾರ ಸಂಜೆ  ಸಂಬಂಧಿಕರು  ಈ ಸ್ಥಳಕ್ಕೆ ತೆರಳಿದ್ದ ಸಂದರ್ಭದಲ್ಲಿ ತಲೆಬುರುಡೆ ಪತ್ತೆಯಾಗಿದೆ. ಆದೂರು ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.