ನೀರಿಗೆ ಬಿದ್ದ ನಾಗರಹಾವು ರಕ್ಷಣೆ

ನೀರಿಗೆ ಬಿದ್ದ ನಾಗರಹಾವು ರಕ್ಷಣೆ

LK   ¦    Jul 22, 2017 11:14:31 AM (IST)
ನೀರಿಗೆ ಬಿದ್ದ ನಾಗರಹಾವು ರಕ್ಷಣೆ

ಪಿರಿಯಾಪಟ್ಟಣ: ಮನೆಯ ಹಿಂಭಾಗದ ನೀರಿನ ತೊಟ್ಟಿಯೊಳಗೆ ಆಕಸ್ಮಿಕವಾಗಿ ಬಿದ್ದ ನಾಗರಹಾವನ್ನು ಗ್ರಾಮದ ಸ್ನೇಕ್ ಗಿರೀಶ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಕಂಪಲಾಪುರ ಕೊಪ್ಪಲಿನ ಚಿಕ್ಕಣ್ಣರವರ ಮನೆಯ ಹಿಂಭಾಗದ ತೊಟ್ಟಿಯಲ್ಲಿ ಅರ್ಧಭಾಗ ನೀರು ತುಂಬಿದ್ದು ಎಂದಿನಂತೆ ಬೆಳಗ್ಗೆ 5.30ಕ್ಕೆ ಶೌಚಾಲಯಕ್ಕೆ ಹೋಗಲು ಬಿಂದಿಗೆಯಲ್ಲಿ ನೀರು ತರಲು ಹೋದಾಗ ಭುಸ್ಸೆಂಬ ಶಬ್ದ ಜೋರಾಗಿ ಕೇಳಿ ಬಂದಿದೆ.

ಇದರಿಂದ ಗಾಬರಿಗೊಂಡ ಇವರು ಬಿಂದಿಗೆಯನ್ನು ಎಸೆದು ದೂರದಿಂದ ನೋಡಿದಾಗ ನಾಗರಹಾವು ಹೆಡೆಎತ್ತಿ ನೋಡುತ್ತಿತ್ತು. ತಕ್ಷಣ ಸ್ನೇಕ್ ಗಿರೀಶ್ ರವರಿಗೆ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಹಿಡಿದು ಗ್ರಾಮದ ಹೊರಭಾಗದ ಕಂಬಿಬೋರೆ ಅರಣ್ಯವಲಯಕ್ಕೆ ಬಿಟ್ಟರು.
ಸ್ನೇಕ್ ಗಿರೀಶ್ ಹೇಳಿಕೆಯಂತೆ ನಾಗರಹಾವು ಇಲಿಯನ್ನು ಹುಡುಕಿಕೊಂಡು ಮನೆಯ ಹಿಂಭಾಗ ಬಂದಿರುವಾಗ ಆಕಸ್ಮಿಕವಾಗಿ ತೊಟ್ಟಿಯೊಳಗೆ ಬಿದ್ದಿದೆ. ಅರ್ಧಭಾಗ ನೀರಿದ್ದರಿಂದ ಮೇಲೆ ಹತ್ತಲು ಆಗಿಲ್ಲ, ಒಟ್ಟಾರೆ ಯಾರೋ ಆದರೂ ಹಾವುಗಳನ್ನು ಕಂಡರೆ ಕೊಲ್ಲಬೇಡಿ, ಅವುಗಳ್ನು ರಕ್ಷಿಸಿ ಅವು ಸಹ ನಮ್ಮಂತೆಯೇ ಜೀವಿಗಳು ಎಂದರು.