ಲಂಚಕೋರ ಸಹಕಾರ ಸಂಘದ ವ್ಯವಸ್ಥಾಪಕ ಜೈಲು ಪಾಲು

ಲಂಚಕೋರ ಸಹಕಾರ ಸಂಘದ ವ್ಯವಸ್ಥಾಪಕ ಜೈಲು ಪಾಲು

Megha R Sanadi   ¦    Sep 16, 2020 02:45:36 PM (IST)
ಲಂಚಕೋರ ಸಹಕಾರ ಸಂಘದ ವ್ಯವಸ್ಥಾಪಕ ಜೈಲು ಪಾಲು

ಕಲಬುರ್ಗಿ: ಚೆಕ್ ನೀಡಲು ತಲಾ ಒಂದು ಚೆಕ್ ಗೆ ₹5 ಸಾವಿರ ನೀಡಬೇಕು ಎಂದು ಒತ್ತಾಯಿಸಿ ರೈತನೊಬ್ಬನಿಂದ ₹15 ಸಾವಿರ ಲಂಚ ಪಡೆಯಲು ಮುಂದಾಗಿದ್ದ ಆರೋಪದ ಮೇಲೆ ಪೊಲೀಸರ ವಶಕ್ಕೆ ಒಳಗಾಗಿದ್ದ ಚಿತ್ತಾಪುರದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವ್ಯವಸ್ಥಾಪಕನಿಗೆ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

ರೈತ ಚಿತ್ತಾಪುರದ ಅಂತಯ್ಯ ಸಾತಪ್ಪ ಕಲಾಲ ಸಂಘಕ್ಕೆ ಮಾರಾಟ ಮಾಡಿದ್ದ ಉದ್ದಿನ ಬೆಳೆ ಚೆಕ್ ವಿತರಿಸಲು ₹ 15 ಸಾವಿರ ಲಂಚ ನೀಡುವಂತೆ ಒತ್ತಾಯಿಸಿದ್ದರು. ಇದರಿಂದ ಬೇಸತ್ತ ರೈತ  18 ಮಾರ್ಚ್‌ 2013ರಂದು ಪೊಲೀಸರಿಗೆ ದೂರು ನೀಡಿದ್ದರು.  

ಪ್ರಕರಣದ ವಿಚಾರಣೆಯು ಮುಕ್ತಾಯವಾಗಿದ್ದು, ವ್ಯವಸ್ಥಾಪಕ ಬಸವರಾಜ ಗುಳೇದಗೆ ಜಿಲ್ಲಾ ಪ್ರಧಾನ ಹಾಗು ವಿಶೇಷ ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಅವರು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ದೋಶಿ  ಬಸವರಾಜ ಗುಳೇದಗೆ ಕಲಂ. 7 ಪಿ.ಸಿ ಆಕ್ಟ್‌ನಡಿ 3 ವರ್ಷ ಶಿಕ್ಷೆ ₹ 5 ಸಾವಿರ ದಂಡ ಹಾಗೂ ಜೊತೆಗೆ ಲಂಚ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ 3 ವರ್ಷ ಶಿಕ್ಷೆ ₹ 5 ಸಾವಿರ ದಂಡ ವಿಧಿಸಿ ಎಂದು ನ್ಯಾಯಲಯ ತೀರ್ಪು ನೀಡಿದೆ.