News Kannada
Tuesday, March 28 2023

ಸಂಪಾದಕರ ಆಯ್ಕೆ

ಡಿಸ್ನಿ + ಹಾಟ್ ಸ್ಟಾರ್, ಕೇವಲ 49 ರೂಪಾಯಿಗಳಿಗೆ ಚಂದಾದಾರಿಕೆ

Photo Credit :

ಗ್ರಾಹಕರನ್ನು ತನ್ನತ್ತ ಸೆಳೆಯುವ ಸಲುವಾಗಿ ನೆಟ್​ಫ್ಲಿಕ್ಸ್​ ತನ್ನ ಚಂದಾದಾರಿಕೆಯ ಬೆಲೆಯಲ್ಲಿ ಇಳಿಕೆ ಮಾಡಿರುವ ಬೆನ್ನಲ್ಲೇ ಇದೀಗ ಡಿಸ್ನಿ + ಹಾಟ್​ಸ್ಟಾರ್​ ಕೂಡ ಇದೇ ಹಾದಿಯನ್ನು ತುಳಿದಿದೆ. ತಿಂಗಳಿಗೆ ಕೇವಲ 49 ರೂಪಾಯಿಗಳಿಗೆ ಚಂದಾದಾರಿಕೆಯನ್ನು ನೀಡಲು ಮುಂದಾದ ಹಾಟ್​ಸ್ಟಾರ್ ಈ ಮೂಲಕ ತನ್ನ ರೈವಲ್​ ನೆಟ್​ಫ್ಲಿಕ್ಸ್​ಗೆ ಠಕ್ಕರ್ ನೀಡಲು ಸಜ್ಜಾಗಿದೆ.

ರೆಡಿಟ್​ ಬಳಕೆದಾರರೊಬ್ಬರು ಈ ವಿಚಾರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದು ಕೇವಲ 49 ರೂಪಾಯಿಗಳಿಗೆ ಚಂದಾದಾರಿಕೆ ಸಿಗುವಂತೆ ಮಾಡಿದ ಡಿಸ್ನಿ + ಹಾಟ್​ಸ್ಟಾರ್​ಗೆ ಧನ್ಯವಾದ ಅಂತಾ ಬರೆದುಕೊಂಡಿದ್ದಾರೆ.

ಈ ಪ್ಲಾನ್​​ ಮೂಲಕ ಓರ್ವ ವ್ಯಕ್ತಿ ಮಾತ್ರ ಹಾಟ್​ ಸ್ಟಾರ್ ಬಳಕೆ ಮಾಡಬಹುದಾಗಿದೆ. ಹೆಚ್​ಡಿ 720 ಪಿ ರೆಸಲ್ಯೂಷನ್​​ನಲ್ಲಿ ಈ ಪ್ಲಾನ್​ ಲಭ್ಯವಿರಲಿದೆ. ಇದು ಜಾಹಿರಾತು ಸಹಿತ ಯೋಜನೆಯಾಗಿರುವುದರಿಂದ ಯಾವುದೇ ಸಿನಿಮಾಗಳನ್ನು ವೀಕ್ಷಿಸುವ ವೇಳೆ ಜಾಹೀರಾತುಗಳನ್ನೂ ವೀಕ್ಷಿಸುವುದು ಅನಿವಾರ್ಯವಾಗಿರಲಿದೆ.

ಇದನ್ನು ಹೊರತುಪಡಿಸಿ ಡಿಸ್ನಿ + ಹಾಟ್​ಸ್ಟಾರ್​ 199 ರೂಪಾಯಿ ಮೌಲ್ಯದ ಇನ್ನೊಂದು ಪ್ಲಾನ್​ನ್ನು ಪರಿಚಯಿಸಿದೆ. ಇದರಲ್ಲಿ ನಿಮಗೆ ಆರು ತಿಂಗಳುಗಳ ಹಾಟ್​ ಸ್ಟಾರ್​ ಚಂದಾದಾರಿಕೆ ಸಿಗಲಿದೆ.

ಹಾಟ್​ ಸ್ಟಾರ್​ನ ಪ್ಲಾನ್​ಗಳು

ಪ್ಲಾನ್​ ಮೌಲ್ಯ ಪ್ರಯೋಜನಗಳು ಡಿವೈಸ್​​ ಸಂಪರ್ಕ ಅವಧಿ
ಮೊಬೈಲ್​ 499 ರೂ. ಹೆಚ್​ಡಿ ಕ್ವಾಲಿಟಿ, ಜಾಹಿರಾತು ಸಹಿತ 1 1 ವರ್ಷ
ಸೂಪರ್​ 899 ರೂ. ಹೆಚ್​ಡಿ ಕ್ವಾಲಿಟಿ, ಜಾಹಿರಾತು ಸಹಿತ 2 1 ವರ್ಷ
ಪ್ರೀಮಿಯಂ 299 ರೂ. ಹೆಚ್​ಡಿ ಕ್ವಾಲಿಟಿ, ಜಾಹಿರಾತು ರಹಿತ 4 1 ತಿಂಗಳು
ಪ್ರೀಮಿಯಂ 1499 ರೂ. ಹೆಚ್​ಡಿ ಕ್ವಾಲಿಟಿ, ಜಾಹಿರಾತು ರಹಿತ 4 1 ವರ್ಷ

See also  2019 ಕ್ಕೆ ಹೋಲಿಸಿದರೆ 2020 ರಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಕುಸಿತ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು