ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರಸ್ಥಾನ ಕಾಯ್ದುಕೊಂಡ ಸ್ಟೀವ್ ಸ್ಮಿತ್

ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರಸ್ಥಾನ ಕಾಯ್ದುಕೊಂಡ ಸ್ಟೀವ್ ಸ್ಮಿತ್

HSA   ¦    Sep 16, 2019 02:50:23 PM (IST)
ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಅಗ್ರಸ್ಥಾನ ಕಾಯ್ದುಕೊಂಡ ಸ್ಟೀವ್ ಸ್ಮಿತ್

ದುಬೈ: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಡ್ರಾಗೊಂಡ ಬಳಿಕ ಬಿಡುಗಡೆ ಮಾಡಲಾದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ರ‍್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಬೌಲಿಂಗ್ ನಲ್ಲಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಅವರು ಅಗ್ರ ರ‍್ಯಾಂಕ್ ನಲ್ಲಿದ್ದಾರೆ.

ಐದನೇ ಟೆಸ್ಟ್ ನಲ್ಲಿ ಸ್ಮಿತ್ 80 ಮತ್ತು 23 ರನ್ ಬಾರಿಸಿದ್ದರು. ಇದರಿಂದ ಅವರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(937 ಅಂಕ)ಗಿಂತಲೂ ಮುಂದಿದ್ದಾರೆ.

ಸರಣಿ ಆರಂಭಕ್ಕೆ ಮೊದಲು ಸ್ಮಿತ್ ಅವರು ನಾಲ್ಕನೇ ಸ್ಥಾನದಲ್ಲಿದ್ದರು.