ಟೆಸ್ಟ್ ಚಾಂಪಿಯನ್ ಶಿಪ್ ಫೈನಲಿಗೆ ಅಂಕಗಳಿಂದ ತಂಡಗಳ ನಿರ್ಧಾರ

ಟೆಸ್ಟ್ ಚಾಂಪಿಯನ್ ಶಿಪ್ ಫೈನಲಿಗೆ ಅಂಕಗಳಿಂದ ತಂಡಗಳ ನಿರ್ಧಾರ

HSA   ¦    Nov 16, 2020 08:31:05 AM (IST)
ಟೆಸ್ಟ್ ಚಾಂಪಿಯನ್ ಶಿಪ್ ಫೈನಲಿಗೆ ಅಂಕಗಳಿಂದ ತಂಡಗಳ ನಿರ್ಧಾರ

ನವದೆಹಲಿ: ತಂಡಗಳು ಆಡಿರುವಂತಹ ಪಂದ್ಯಗಳಿಂದ ಪಡೆದ ಅಂಕಗಳ ಆಧಾರದ ಮೇಲೆ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲಿಗೆ ತಂಡಗಳನ್ನು ನಿರ್ಧರಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಹೇಳಿದೆ.

ಈ ಬಗ್ಗೆ ಅಂತಿಮ ನಿರ್ಧಾರವನ್ನು ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು. ಕೊರೋನಾ ವೈರಸ್ ನಿಂದ ಮೊದಲ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಗೆ ದೊಡ್ಡ ಸಮಸ್ಯೆಯಾಗಿದೆ.

ಕೊರೋನಾ ಸಮಯದಲ್ಲಿ ಆಡದೆ ಇರುವಂತಹ ಟೆಸ್ಟ್ ಗಳನ್ನು ಡ್ರಾ ಎಂದು ಪರಿಗಣಿಸಬೇಕು ಎಂದು ಸಮಿತಿಯು ಹೇಳಿತ್ತು. ಆದರೆ ಇದನ್ನು ಬಳಿಕ ತಿರಸ್ಕರಿಸಲಾಗಿದೆ.

ಟೆಸ್ಟ್ ಚಾಂಪಿಯನ್ ಶಿಪ್ ಆಗಸ್ಟ್ 1, 2019ರಿಂದ ಆರಂಭವಾಗಿದೆ. ಎರಡು ವರ್ಷಗಳಲ್ಲಿ ವಿಶ್ವದ ಅಗ್ರ 9 ಟೆಸ್ಟ್ ತಂಡಗಳು ಆಡುವಂತಹ ಪಂದ್ಯಗಳಿಂದ ಇದರ ಅಂಕಗಳನ್ನು ನಿರ್ಧರಿಸಲಾಗುತ್ತದೆ.