ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಗೆ ದಂಡ

ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಗೆ ದಂಡ

HSA   ¦    Aug 12, 2020 10:48:09 AM (IST)
ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಗೆ ದಂಡ

ಮ್ಯಾಂಚೆಸ್ಟರ್: ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ನ ಮೊದಲ ಮಟ್ಟದ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ದಂಡ ಹೇರಲಾಗಿದೆ.

ಮಂಗಳವಾರ ಮ್ಯಾಂಚೆಸ್ಟರ್ ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಬ್ರಾಡ್ ನಿಯಮ ಉಲ್ಲಂಘಿಸಿರುವುದಕ್ಕಾಗಿ ಶೇ.15ರಷ್ಟು ದಂಡ ಹೇರಲಾಗಿದೆ.

ಅಸಭ್ಯ ಭಾಷೆ ಬಳಕೆ, ಅಗೌರವ ತೋರಿಸಿರುವ ಹಿನ್ನೆಲೆಯಲ್ಲಿ ಬ್ರಾಡ್ ಗೆ ದಂಡ ಹೇರಲಾಗಿದೆ ಎಂದು ಐಸಿಸಿ ತಿಳಿಸಿದೆ.