ಮ್ಯಾರಥಾನ್ ಚಾಂಪಿಯನ್ ಗೆ ನಾಲ್ಕು ವರ್ಷ ನಿಷೇಧ ಶಿಕ್ಷೆ

ಮ್ಯಾರಥಾನ್ ಚಾಂಪಿಯನ್ ಗೆ ನಾಲ್ಕು ವರ್ಷ ನಿಷೇಧ ಶಿಕ್ಷೆ

Megha R Sanadi   ¦    Oct 16, 2020 02:06:33 PM (IST)
ಮ್ಯಾರಥಾನ್  ಚಾಂಪಿಯನ್ ಗೆ ನಾಲ್ಕು ವರ್ಷ ನಿಷೇಧ ಶಿಕ್ಷೆ

ಮೊನಾಕೊ: 28 ವರ್ಷದ ಕೀನ್ಯಾದ ಡೇನಿಯಲ್ ವಾಂಜಿರು ಉದ್ದೀಪನ ಮದ್ದು ಸೇವನೆ ಮಾಡಿದ್ದು ಸಾಬೀತಾಗಿದೆ. ಈತ 3 ವರ್ಷಗಳ ಹಿಂದೆ ಲಂಡನ್ ಮ್ಯಾರಥಾನ್ ನಲ್ಲಿ ಚಾಂಪಿಯನ್ ಆಗಿದ್ದರು.

2017ರಲ್ಲಿ ಲಂಡನ್ ಮತ್ತು 2016ರಲ್ಲಿ ಆಮ್ ಸ್ಟ್ರಡಮ್ನಲ್ಲಿ ನಡೆದಿದ್ದ ಮ್ಯಾರಥಾನ್‌ಗಳಲ್ಲಿ ಸ್ಪರ್ಧಿಸಿದ್ದ ಕೀನ್ಯಾದ ವಾಂಜಿರು ಅವರನ್ನು ಕಳೆದ ಏಪ್ರಿಲ್‌ನಲ್ಲಿ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. 2019ರ ಮಾರ್ಚ್‌ 9ರಂದು ಮಾಡಲಾಗಿದ್ದ ರಕ್ತಪರೀಕ್ಷೆಯಲ್ಲಿ ವಾಂಜಿರು ಅವರ ದೇಹದಲ್ಲಿ ಹಿಮೊಗ್ಲೋಬಿನ್ ಪ್ರಮಾಣವು ಸಾಧಾರಣಕ್ಕಿಂತ ಹೆಚ್ಚಿದೆ ಎಂಬುದು ತಿಳಿದುಬಂದಿತ್ತು. ಅದರ ಆಧಾರದ ಮೇರಿಗೆ ಮತ್ತಷ್ಟು ತಪಾಸಣೆಗೊಳಪಡಿಸಿದಾಗ ನಿಷೇಧಿತ ಮದ್ದು ಸೇವನೆ ಮಾಡಿದ್ದು ದೃಢಪಟ್ಟಿತು ಎಂದು ಉದ್ದೀಪನ ಮದ್ದು ತಡೆ ಘಟಕವು ತಿಳಿಸಿದೆ.

ಈ ಎಲ್ಲಾ ಕಾರಣಗಳಿಂದ ಮಾದಕ ಸೇವನೆಯ ಆಧಾರದ ಮೇಲೆ ಕೀನ್ಯಾದ ಡೇನಿಯಲ್ ಅವರನ್ನು 2023ರ ಡಿಸೆಂಬರ್‌ 8ರ ವರೆಗೆ ನಿಷೇಧಿಸಲಾಗಿದೆ.