ಮ್ಯಾಚ್ ಫಿಕ್ಸಿಂಗ್ ಹಗರಣ: ಪ್ರಮುಖ ಆರೋಪಿ ಭಾರತಕ್ಕೆ ಗಡಿಪಾರು

ಮ್ಯಾಚ್ ಫಿಕ್ಸಿಂಗ್ ಹಗರಣ: ಪ್ರಮುಖ ಆರೋಪಿ ಭಾರತಕ್ಕೆ ಗಡಿಪಾರು

HSA   ¦    Feb 13, 2020 03:00:29 PM (IST)
ಮ್ಯಾಚ್ ಫಿಕ್ಸಿಂಗ್ ಹಗರಣ: ಪ್ರಮುಖ ಆರೋಪಿ ಭಾರತಕ್ಕೆ ಗಡಿಪಾರು

ನವದೆಹಲಿ: ಕ್ರಿಕೆಟ್ ಲೋಕವನ್ನೇ ದಂಗುಬಡಿಸಿದ್ದ 2000ರಲ್ಲಿ ಹೊರಬಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದ ಪ್ರಮುಖ ಆರೋಪಿಯಾಗಿರುವ ಬುಕ್ಕಿ ಸಂಜಯ್ ಚಾವ್ಲಾನನ್ನು ಇಂಗ್ಲೆಂಡ್ ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ.

ದೆಹಲಿ ಪೊಲೀಸರು ಈ ಪ್ರಕರಣದ ಪ್ರಮುಖ ಆರೋಪಿಯನ್ನು ತೀವ್ರ ಭದ್ರತೆಯಲ್ಲಿ ಭಾರತಕ್ಕೆ ಕರೆತಂದರು.

2000ದಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಆಗಿನ ಕೆಲವು ದೊಡ್ಡ ಕ್ರಿಕೆಟಿಗರು ಭಾಗಿಯಾಗಿದ್ದರು. ದಕ್ಷಿಣ ಆಫ್ರಿಕಾದ ಆಗಿನ ನಾಯಕ ಹ್ಯಾನ್ಸಿ ಕ್ರೋನಿಯೆ, ಭಾರತದ ನಾಯಕ ಮೊಹಮ್ಮದ್ ಅಜರುದ್ದೀನ್, ಅಜಯ್ ಜಡೇಜಾ ಮತ್ತು ಮನೋಜ್ ಪ್ರಭಾಕರ್ ಹೆಸರು ಕೇಳಿಬಂದಿತ್ತು. ಕ್ರೋನಿಯೆ ದಕ್ಷಿಣ ಆಫ್ರಿಕಾದಲ್ಲಿ ನಡೆದಂತಹ ಖಾಸಗಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬಗ್ಗೆ ಕೂಡ ಊಹಾಪೋಹಗಳು ಕೇಳಿಬಂದಿದ್ದವು.

1992ರಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡೆಸಿರುವಂತಹ ಒಪ್ಪಂದದ ಪ್ರಕಾರ ಇದು ಜನಪ್ರಿಯ ವ್ಯಕ್ತಿಯೊಬ್ಬನ ಗಡಿಪಾರು ಆಗಿರದೆ. 2000ರಲ್ಲಿ ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ಆಗಮಿಸಿದ್ದ ವೇಳೆ ಚಾವ್ಲಾ ಕೆಲವು ಪ್ರಮುಖ ಪಂದ್ಯಗಳನ್ನು ಫಿಕ್ಸ್ ಮಾಡಿದ್ದ.

ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಆಗಿನ ಕ್ರಿಕೆಟಿಗರಾದ ಕ್ರೋನಿಯೆ, ಹರ್ಷಲ್ ಗಿಬ್ಸ್ ಮತ್ತು ನಿಕಿ ಬೊಯೆ ಕೂಡ ಭಾಗಿಯಾಗಿದ್ದರು. ದೆಹಲಿ ಪೊಲೀಸರು ಈ ಬೃಹತ್ ಹಗರಣವನ್ನು ಬಯಲಿಗೆಳೆದಿದ್ದರು.