ಜಪಾನ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ ಗೆಲುವು

ಜಪಾನ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ ಗೆಲುವು

HSA   ¦    Aug 17, 2019 04:27:55 PM (IST)
ಜಪಾನ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ ಗೆಲುವು

ನವದೆಹಲಿ: ಭಾರತೀಯ ಮಹಿಳಾ ಹಾಕಿ ತಂಡವು ಒಲಿಂಪಿಕ್ ಟೆಸ್ಟ್ ಇವೆಂಟ್ ಹಾಕಿ ಟೂರ್ನಿಯಲ್ಲಿ ಆತಿಥೇಯ ಜಪಾನ್ ವಿರುದ್ಧ 2-1ರ ಗೆಲುವು ದಾಖಲಿಸಿಕೊಂಡಿದೆ.

ಗುರ್ಜಿತ್ ಕೌರ್ 9ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಮುನ್ನಡೆ ಒದಗಿಸಿಕೊಟ್ಟರು. 16ನೇ ನಿಮಿಷದಲ್ಲಿ ಅಕಿ ಮಿಟ್ಸುಹಶಿ ಬಾರಿಸಿದ ಗೋಲಿನಿಂದ ಆತಿಥೇಯರು ಸಮಬಲ ಸಾಧಿಸಿದರು.

35ನೇ ನಿಮಿಷದಲ್ಲಿ ಗುರ್ಜಿತ್ ಪೆನಾಲ್ಟಿಯಲ್ಲಿ ಮತ್ತೊಂದು ಗೋಲ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಭಾರತದ ಆಟಗಾರ್ತಿಯರು ಆರಂಭದಲ್ಲೇ ಆಕ್ರಮಣಕಾರಿಯಾಗಿ ಆಡಿದ ಪರಿಣಾಮವಾಗಿ ಮೊದಲ ಹತ್ತು ನಿಮಿಷದಲ್ಲಿ ಗೋಲು ಬಾರಿಸುವ ಅವಕಾಶ ಪಡೆದುಕೊಂಡರು.