ಇಂಗ್ಲೆಂಡ್ ಪ್ರವಾಸಕ್ಕೆ ಕುಟುಂಬದೊಂದಿಗೆ ತೆರಳಲು ಟೀಮ್ ಇಂಡಿಯಾಗೆ ಅನುಮತಿ!

ಇಂಗ್ಲೆಂಡ್ ಪ್ರವಾಸಕ್ಕೆ ಕುಟುಂಬದೊಂದಿಗೆ ತೆರಳಲು ಟೀಮ್ ಇಂಡಿಯಾಗೆ ಅನುಮತಿ!

Jayashree Aryapu   ¦    Jun 01, 2021 04:43:41 PM (IST)
ಇಂಗ್ಲೆಂಡ್ ಪ್ರವಾಸಕ್ಕೆ ಕುಟುಂಬದೊಂದಿಗೆ ತೆರಳಲು ಟೀಮ್ ಇಂಡಿಯಾಗೆ ಅನುಮತಿ!

ಮುಂಬೈ: ಇಂಗ್ಲೆಂಡ್ ಸರಣಿಗೆ ತೆರಳುತ್ತಿರುವ ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ ಆಟಗಾರರಿಗೆ ಬ್ರಿಟನ್ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಆಟಗಾರರಿಗೆ ತಮ್ಮ ಕುಟುಂಬದವರೊಂದಿಗೆ ಇಂಗ್ಲೆಂಡ್ ಗೆ ತೆರಳಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ.

ಭಾರತದ ಪುರುಷರ ಮತ್ತು ವನಿತೆಯರ ತಂಡ ಮುಂಬೈನಲ್ಲಿ ಕ್ವಾರಂಟೈನ್ ನಲ್ಲಿದೆ. ಜೂನ್ 3ರಂದು ಎರಡೂ ತಂಡಗಳು ಒಟ್ಟಿಗೆ ಇಂಗ್ಲೆಂಡ್ ಗೆ ತೆರಳಲಿದೆ. ಕ್ರಿಕೆಟಿಗರ ಕುಟುಂಬಿಕರು ಕೂಡಾ ಅದೇ ವಿಮಾನದಲ್ಲಿ ಲಂಡನ್ ಗೆ ಪ್ರಯಾಣ ಬೆಳೆಸಲಿದ್ದಾರೆ.

ಲಂಡನ್ ನಿಂದ ತಂಡ ಸೌಥಂಪ್ಟನ್ ಗೆ ತೆರಳಲಿದ್ದು, ಅಲ್ಲಿ ಐಸೋಲೇಶನ್ ಗೆ ಒಳಗಾಗಲಿದೆ. ಈ ಸಮಯದಲ್ಲಿ ಕೋವಿಡ್ ಪರೀಕ್ಷೆಗಳು ನಡೆಯಲಿದೆ. ಭಾರತ ತಂಡ ಜೂನ್ 18ರಂದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.

ನಂತರ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ಇದೇ ವೇಳೆ ಮಹಿಳಾ ತಂಡವು ಇಂಗ್ಲೆಂಡ್ ಮಹಿಳೆಯರ ವಿರುದ್ಧ ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನಾಡಲಿದೆ. ವಿರಾಟ್ ಕೊಹ್ಲಿ ಬಳಗ ಸಪ್ಟೆಂಬರ್ 14ರವರೆಗೆ ಇಂಗ್ಲೆಂಡ್ ನಲ್ಲಿರಲಿದೆ. ಅಲ್ಲಿಂದ ಐಪಿಎಲ್ ಪಂದ್ಯಕ್ಕಾಗಿ ಯುಎಇಗೆ ತೆರಳುವ ಸಾಧ್ಯತೆ ಹೆಚ್ಚಿದೆ.