ಐಪಿಎಲ್ ಅಕ್ಟೋಬರ್-ನವಂಬರ್ ನಲ್ಲಿ ಆಯೋಜಿಸುವ ಸಾಧ್ಯತೆ: ಬಿಸಿಸಿಐ

ಐಪಿಎಲ್ ಅಕ್ಟೋಬರ್-ನವಂಬರ್ ನಲ್ಲಿ ಆಯೋಜಿಸುವ ಸಾಧ್ಯತೆ: ಬಿಸಿಸಿಐ

HSA   ¦    Mar 31, 2020 04:41:23 PM (IST)
ಐಪಿಎಲ್ ಅಕ್ಟೋಬರ್-ನವಂಬರ್ ನಲ್ಲಿ ಆಯೋಜಿಸುವ ಸಾಧ್ಯತೆ: ಬಿಸಿಸಿಐ

ನವದೆಹಲಿ: ಕೊರೋನಾ ವೈರಸ್ ನಿಂದಾಗಿ ಮುಂದೂಡಲ್ಪಟ್ಟಿರುವಂತಹ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಅಕ್ಟೋಬರ್-ನವಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೇಳಿದೆ.

ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಪುರುಷರ ಟಿ-20 ವಿಶ್ವಕಪ್ ನ್ನು ಮುಂದೂಡಿದರೆ ಮಾತ್ರ ಇದು ಸಾಧ್ಯವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.

ಅಕ್ಟೋಬರ್ 18ರಿಂದ ನವಂಬರ್ 15ರ ತನಕ ಆಸ್ಟ್ರೇಲಿಯಾದಲ್ಲಿ ನಡೆಯಲಿರುವಂತಹ ಟಿ-20 ವಿಶ್ವಕಪ್ ನ್ನು ಐಸಿಸಿ ಮುಂದೂಡಿದರೆ ಮಾತ್ರ ಅಕ್ಟೋಬರ್-ನವಂಬರ್ ನಲ್ಲಿ ಐಪಿಎಲ್ ನಡೆಸಬಹುದು ಎಂದು ಬಿಸಿಸಿಐ ಅಧಿಕೃತ ಮೂಲಗಳು ಹೇಳಿವೆ.