ಮಡಿಕೇರಿ : ಹಾರಂಗಿ ಅತ್ತೂರಿನ ಜ್ಞಾನ ಗಂಗಾ ವಸತಿ ಶಾಲೆಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಕಬಡ್ಡಿ, ವಾಲಿಬಾಲ್ ಮತ್ತು ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಡಿ.19 ಮತ್ತು 20 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಖಜಾಂಚಿ ಟಿ.ಕೆ. ಸುಧೀರ್ ಕ್ರೀಡಾಚಟುವಟಿಕೆ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಹೊರಹೊಮ್ಮಿಸಲು ವೇದಿಕೆಯನ್ನು ಸೃಷ್ಟಿಸುವುದಕ್ಕಾಗಿ ಡಿ.19 ಮತ್ತು 20 ರಂದು ಅಂತರ್ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಬಾಲಕಿಯರಿಗಾಗಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಮಾತ್ರ ಆಯೋಜಿಸಲಾಗಿದೆ.ಡಿ.21 ರಂದು ಅಂತರ್ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಗಿದೆ. ಡಿ.22 ರಂದು ಶಾಲಾ ವಾರ್ಷಿಕೋತ್ಸವ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಒಲಂಪಿಯನ್ ಡಾ.ಎಂ.ಪಿ. ಗಣೇಶ್ , ನಿವೃತ್ತ ಉಪ ಕುಲಪತಿಗಳಾದ ಪ್ರೊ.ಕೆ.ಸಿ.ಬೆಳ್ಯಪ್ಪ , ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮನೋಜ್ ಕುಮಾರ್ ಭಾಗವಹಿಸಲಿದ್ದಾರೆಂದು ಟಿ.ಕೆ. ಸುಧೀರ್ ತಿಳಿಸಿದರು.
ವಿದ್ಯಾರ್ಥಿಗಳಿಗಾಗಿ ನಡೆಯುವ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ. ಹಾಗೂ ತೃತೀಯ ಬಹುಮಾನವಾಗಿ 7,500 ರೂ.ಗಳನ್ನು ನೀಡಲಾಗುತ್ತಿದೆ. ಆಧ್ಯಾತ್ಮದೊಂದಿಗೆ ಶಿಸ್ತಿನ ಶಿಕ್ಷಣವನ್ನು ನೀಡುವ ಕಾರ್ಯಕ್ಕೆ 2002 ರಲ್ಲಿ ಜ್ಞಾನಗಂಗಾ ವಸತಿ ಶಾಲೆಯನ್ನು ಆರಂಭಿಸಲಾಗಿದ್ದು, ಆರಂಭದಲ್ಲಿ 17 ಮಂದಿ ವಿದ್ಯಾರ್ಥಿಗಳಿದ್ದ ಶಾಲೆ, ಇಂದು 1200 ವಿದ್ಯಾರ್ಥಿಗಳನ್ನು ಹೊಂದಿದೆಯೆಂದು ಟಿ.ಕೆ. ಸುಧೀರ್ ತಿಳಿಸಿದರು. ಪ್ರತಿವರ್ಷ ಎಸ್ಎಸ್ಎಲ್ಸಿಯಲ್ಲಿ ಶೇ.100 ರಷ್ಟು ಸಾಧನೆ ಮಾಡುತ್ತಿರುವ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಟಿ.ಎಂ.ಶರೀನ್, ಧರ್ಮದಶರ್ಿಗಳಾದ ರಾಮ್ ದೇವಯ್ಯ ಹಾಗೂ ಶಿಕ್ಷಕಿ ಬಿ.ಎಸ್. ಸವಿತಾ ಉಪಸ್ಥಿತರಿದ್ದರು.