ಕಾರ್ಕಳ: ಮೊಗವೀರ ಯುವಸಂಘಟನೆಗೆ ಉದ್ಯಾವರ ಘಟಕ ಇದರ ದಶಮಾನೋತ್ಸವ ಪ್ರಯುಕ್ತ ಭಿನ್ನ ಸಾಮಥ್ಯವುಳ್ಳ ಹಾಗೂ ಶ್ರವಣದೋಷ ಹೊಂದಿದ ವಿಶೇಷ ಶಾಲಾ ಮಕ್ಕಳಿಗಾಗಿ ಆಯೋಜಿಸಿದ ಕ್ರೀಡಾಕೂಟದಲ್ಲಿ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ (ರಿ.) ವತಿಯಿಂದ ಕಾರ್ಕಳದ ಪರಪ್ಪುವಿನಲ್ಲಿ ನಡೆಸುತ್ತಿರುವ ವಿಜೇತ ವಸತಿಯುತ ಶಾಲೆಯ ಜಿಲ್ಲಾ ಮಟ್ಟದ ಪಥಸಂಚಲನದಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಕ್ರೀಡಾಕೂಟದಲ್ಲಿ 30 ಮಂದಿ ವಿಶೇಷ ಮಕ್ಕಳು ಭಾಗವಹಿಸಿದ್ದು, 10 ಚಿನ್ನದ ಪದಕ, 7 ಬೆಳ್ಳಿ ಹಾಗೂ 8 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ವಿಜೇತರನ್ನು ಮ್ಯಾನೇಜಿಂಗ್ ಟ್ರಸ್ಟಿ ಕಾಂತಿ ಹರೀಶ್ ಅಧ್ಯಕ್ಷ ರತ್ನಾಕರ್ ಅಮೀನ್ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ತರಬೇತುದಾರ ಉಮಾಶಂಕರ್ ಮತ್ತು ಸಿಬ್ಬಂದಿಯವರು ಅಭಿನಂದಿಸಿದ್ದಾರೆ.