News Kannada
Wednesday, October 05 2022

ಕ್ರೀಡೆ

ಬಂಟ್ವಾಳ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಣ್ಮನ ಸೆಳೆಯುವ ಕ್ರೀಡೋತ್ಸವ - 1 min read

Photo Credit :

ಬಂಟ್ವಾಳ ಶ್ರೀರಾಮ  ವಿದ್ಯಾಕೇಂದ್ರದಲ್ಲಿ ಕಣ್ಮನ ಸೆಳೆಯುವ ಕ್ರೀಡೋತ್ಸವ

ಬಂಟ್ವಾಳ: ಕಣ್ಮನ ಸೆಳೆಯುವ ಕಸರತ್ತುಗಳು, ಮನೋಜ್ಞವಾಗಿ ಮೂಡಿ ಬಂದ ನೃತ್ಯಗಳು, ಬೆರಗಾಗಿಸುವ ನೋಟಗಳು.. ಹೀಗೆ ಅಲ್ಲಿ ಸೃಷ್ಟಿಯಾಗಿತ್ತು ಹೊಸದೊಂದು ಲೋಕ. ಹೌದು ಇದು ಕಲ್ಲಡ್ಕದ  ಶ್ರೀರಾಮ ವಿದ್ಯಾಕೇಂದ್ರದ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ, ಹಾಗೂ ಪದವಿ ತರಗತಿಗಳನ್ನೊಳಗೊಂಡ ಕಲ್ಲಡ್ಕ  ಶ್ರೀರಾಮ  ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಭಾನುವಾರ ರಾತ್ರಿ  3313 ವಿದ್ಯಾರ್ಥಿಗಳು ಸೃಷ್ಟಿಸಿದ  ಅದ್ಭುತ ಲೋಕ.

ವಿದ್ಯಾರ್ಥಿಗಳಿಂದಲೇ ಮೂಡಿಬಂದ  ವಿವಿಧ ಸಾಮೂಹಿಕ ಪ್ರದರ್ಶನಗಳಂತೂ ನೋಡುಗರಿಗೆ ಆನಂದದ ಜೊತೆಗೆ ಅಚ್ಚರಿಯ ಅನುಭವವನ್ನೂ ನೀಡಿತು. ಹೆಜ್ಜೆಯಮೇಲೆ ಹೆಜ್ಜೆಯ ನಿಟ್ಟು ಲಯಬದ್ದವಾಗಿ ನೀಡಿದ ಎಲ್ಲಾ ಪ್ರದರ್ಶನಗಳು ದೇಶಪ್ರೇಮದ ಪಾಠದ ಜೊತೆಯಲ್ಲಿ ಸಾಹಸ ಪ್ರದರ್ಶನ, ಪರಿಸರ ಹಾಗೂ ದೇಶಭಕ್ತಿ ಜಾಗೃತಿಯ ಸಂದೇಶವನ್ನು ನೀಡಿದ ಬಗೆ ವಿಭಿನ್ನವಾಗಿತ್ತು.

ವಿದ್ಯಾಕೇಂದ್ರದ ವಿಶಾಲವಾದ ಮೈದಾನದಲ್ಲಿ ಸಂಜೆ 6 ಗಂಟೆಗೆ ಆರಂಭಗೊಂಡು 8.30 ರವರೆಗೆ ನಡೆದ  ಕ್ರೀಡೋತ್ಸವದಲ್ಲಿ ಪುಟಾಣಿ ಗಳಿಂದ ತೊಡಗಿ ಕಾಲೇಜು ವಿದ್ಯಾರ್ಥಿಗಳವರೆಗಿನ ಮಕ್ಕಳ ಸಾಮೂಹಿಕವಾಗಿ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿಗಳಿಂದ ಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆಕೋಲಾಟ, ನಿಯುದ್ಧ, ಯೋಗಾಸನ, ದೀಪಾರತಿ, ಮಲ್ಲಕಂಬ, ನವಿಲು ನೃತ್ಯ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ, ಕಾಲ್ಚಕ್ರ, ವನಸಂರಕ್ಷಣೆ, ಜನಪದ ನೃತ್ಯ, ದ್ವಿಚಕ್ರ-ಏಕಚಕ್ರ ಸಮತೋಲನ, ಕೂಪಿಕಾ ಸಮತೋಲನ, ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಆಕರ್ಷಕ ಸಾಮೂಹಿಕ ರಚನೆಯ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಕ್ರೀಡೋತ್ಸವದ ಮೆರುಗು ಹೆಚ್ಚಿಸಿತು. ಶರೀರದಾಢ್ರ್ಯತೆಯನ್ನು ಹೆಚ್ಚಿಸುವ ಜನಪದ ಕ್ರೀಡೆ ಮಲ್ಲಕಂಬದ ಜೊತೆಯಲ್ಲಿ ಬಾಟಲಿಗಳ ಮೇಲೆ ಜೋಡಿಸಿದ ತಿರುಗುವ ಮಲ್ಲಕಂಬಗಳಲ್ಲಿ ವಿಶೇಷ ಯೋಗಾಸನ ಪ್ರದರ್ಶನ ಅಚ್ಚರಿ ಮೂಡಿಸಿತು.

ಸಾಹಸಕ್ಕೇನು ಕಡಿಮೆ ಇಲ್ಲ
ದ್ವಿಚಕ್ರ, ಏಕಚಕ್ರಗಳ ವಿವಿಧ ಕಸರತ್ತುಗಳ ಮೂಲಕ ಮೈನವಿರೇಳಿಸುವ ರೋಮಾಂಚನ ದೃಶ್ಯಗಳು. ಮೋಟಾರು ಸೈಕಲುಗಳಲ್ಲಿ ಸಾಹಸಮಯ ಸವಾರಿ. ಟ್ಯೂಬ್ ಲೈಟ್ ಗಳ ಭಿತ್ತಿಯನ್ನು ಎದೆಯೊಡ್ಡಿ ಒಡೆಯುವ ಅದ್ಭುತ ಸಾಹಸ, ಬೆಂಕಿಯೊಂದಿಗೆ ನಿರ್ಭೀತಿಯಿಂದ ತಾಲೀಮುಗಳ ಪ್ರದರ್ಶನ. ಬೆಂಕಿ ಚಕ್ರದೊಳಗೆ ಧುಮುಕುವ ಧೈರ್ಯದ ಪಂಜನು ಬೆಳಗುವ ಬಾಲಕ ಬಾಲಕಿಯರ ಪ್ರದರ್ಶನ ನೋಡುಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತು. ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಚೆಂಡೆ ವಾದನದ ಜೊತೆಯಲ್ಲಿ ಪ್ರದರ್ಶಿಸಿದ ನೃತ್ಯ ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಕಪ್ಪು ಹಣವನ್ನು ಪತ್ತೆ ಹಚ್ಚಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ನೋಟು ಬ್ಯಾನ್ ನಿರ್ಧಾರವನ್ನು ಬೆಂಬಲಿಸಿ ನಡೆಸಿದ ಪ್ರಹಸನವೂ ಚೆನ್ನಾಗಿ ಮೂಡಿಬಂತು. ಪಾಕ್ ಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಕೊಟ್ಟ ಎಚ್ಚರಿಕೆಯನ್ನೂ ದೃಶ್ಯರೂಪದಲ್ಲಿ ತೋರಿಸಿಕೊಡಲಾಯಿತು.

ಒಟ್ಟಿನಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿಶಾಲ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೊನಲು ಬೆಳಕಿನ ಕ್ರೀಡೋತ್ಸವ ಪ್ರೇಕ್ಷಕರನ್ನು ಅದ್ಭುತ ಲೋಕಕ್ಕೆ ಕೊಂಡೊಯ್ಯುತ್ತಾ ಆವರ್ಣನೀಯ ಆನಂದವನ್ನು ನೀಡಿತಲ್ಲದೆ, ಪ್ರತಿಯೊಂದು ಪ್ರದರ್ಶನಗಳಲ್ಲೂ ಏಕಕಾಲದಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಒಟ್ಟಾಗಿ ಪಾಲ್ಗೊಂಡಿದ್ದಲ್ಲದೆ ಪ್ರದರ್ಶನಗಳಲ್ಲಿ ಮಕ್ಕಳ ಶಿಸ್ತು, ಸಹಕಾರ, ಆತ್ಮಸ್ಥೈರ್ಯ, ಸಾಹಸ, ದೃಢಸಂಕಲ್ಪ, ಕ್ರಿಯಾಶೀಲತೆ, ರಾಷ್ಟ್ರಪ್ರೇಮ ಮೊದಲಾದ ಗುಣವಿಶೇಷಗಳು ಅನಾವರಣಗೊಂಡಿತು. ಕ್ರೀಡೋತ್ಸವವು ಮಕ್ಕಳ ಶಾರೀರಿಕ, ಸಾಂಸ್ಕೃತಿಕ, ಸಾಹಸಮಯ ಕ್ಷಣಗಳ ಸಮ್ಮಿಲನವಾಗಿ ನೆರೆದಿದ್ದ ಸಹಸ್ರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

See also  ಪಂಜಾಬ್ ವಿರುದ್ಧ ಕೆಕೆಆರ್ ಗೆ ಜಯ

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ವೈವಿಧ್ಯಮಯ ಶಾರೀರಿಕ ಪ್ರದರ್ಶನದ ಮೂಲಕ ಭಾರತ ಭಕ್ತಿಯ  ಶಕ್ತಿಯ ಜಾಗೃತವಾಗಿದೆ. ನಮ್ಮ ಶ್ರೀರಾಮ ವಿದ್ಯಾಸಂಸ್ಥೆಗೆ ಗುರುತಿಸುವ  ಆಸೆ  ಇಲ್ಲ . ನಮ್ಮನ್ನು ಎಲ್ಲರು ಸ್ವೀಕಾರ ಮಾಡುವಂತೆ ಆಗಬೇಕು, ಕಲ್ಲಡ್ಕವು ದೇಶ ಭಕ್ತಿಯ ಪ್ರತೀಕವಾಗಿದ್ದು ಇಲ್ಲಿನ ವಿದ್ಯಾರ್ಥಿಗಳು ಸಾಂಸ್ಕ್ರೃತಿಕ ಪ್ರತಿನಿಧಿಗಳಾಗಲಿ ಎಂದು ಅಖಿಲ ಭಾರತ ಕುಟುಂಬ ಪ್ರಭೋಧನ್ ಪ್ರಮುಖರಾದ ಸು. ರಾಮಣ್ಣ  ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಭೌದ್ಧಿಕ್ ಪ್ರಮುಖ್ ಮುಕುಂದರ್ ಮಾತಾನಾಡಿ ದೇಶದ ಸಮಸ್ಯೆಗೆ ನಮ್ಮ  ದೇಶದ ಭವಿಷ್ಯ ಮುಂದಿನ  ಜನಾಂಗದ ಮೇಲೆ ನಿಂತಿದೆ. ದೇಶದ ಶಿಕ್ಷಣ ಸಂಸ್ಥೆಗಳಿಗೆ ಶ್ರೀರಾಮ  ವಿದ್ಯಾಕೇಂದ್ರ ಮಾದರಿ ಆಗಬೇಕು ಎಂದರು. ರಸ್ತೆ ಸಾರಿಗೆ ಹೆದ್ದಾರಿ  ಸಚಿವಾಲಯದ ಮಾರ್ಗದರ್ಶಕ ಆರ್. ಸಿ. ಸಿನ್ಹಾ,  ಸುಧೀರ್ ಶೆಟ್ಟಿ ಮುಂಬೈ, ಮುಂಬೈ ಸಂಸದ ರಾಹುಲ್ ರಮೇಶ್ ಶೇವಾಲೆ ಮುಂಬೈ, ಆರ್ ಬಿ ಐ ವಿದೇಶಿ ವಿನಿಮಯದ ಮುಖ್ಯಸ್ಥ ಎ.ಕೆ ಪಾಂಡೆ, ಎನ್,ಆರ್,ಐ ಪೋರಂ ಸೌದಿ ಅರೇಬಿಯ ಸ್ಥಾಪಕ ಅಧ್ಯಕ್ಷ ಬಿ,ಕೆ ಶೆಟ್ಟಿ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ವಿವಿಧ ಕ್ಷೇತ್ರಗಳ ಗಣ್ಯರಾದ ಶಿವಯೋಗಿ ಶಿರೂರು, ಮಂಜುನಾಥ ಹರ್ಲಾಪುರ, ಅಜಿತ್ ರೈ ಪಾದೆ, ಡಾ.ಎನ್.ಕೆ.ಬಿಲ್ಲವ,  ಡಾ.ಆನಂದ್ ಪಾಂಡುರಂಗಿ, ವಿಶ್ವನಾಥ ರಾವ್, ಸುದರ್ಶನ್ ಗುಪ್ತಾ, ರಾಜೇಶ್ ನಾಯ್ಕ್ ,  ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು