ಬ್ಯಾಂಕಾಕ್: ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ 18 ವರ್ಷದೊಳಗಿನ ಮಹಿಳೆಯರ ಭಾರತದ ಹಾಕಿ ತಂಡ ಸಂಗೀತಾ ಕುಮಾರಿ ಅವರ ಭರ್ಜರಿ ಆಟ ಮತ್ತು ಅವರು ದಾಖಲಿಸಿದ ಹ್ಯಾಟ್ರಿಕ್ ಗೋಲುಗಳಿಂದ ಗೆಲುವಿನ ನಗೆ ಬೀರಿದೆ.
ಶುಕ್ರವಾರ ನಡೆದ ಈ ಪಂದ್ಯದಲ್ಲಿ ಚೀನಾ ತೈಪೆ ತಂಡವನ್ನು ಭಾರತ 4–0 ಗೋಲುಗಳಲ್ಲಿ ಸೋಲಿಸಿತು. ಭಾರತ ತಂಡದ ಮಲ್ಲಮಡ ಜಯ ಲೀಲಾವತಿ ಅವರು ಪಂದ್ಯದ ಎರಡನೇ ನಿಮಿಷದಲ್ಲೇ ಗೋಲು ದಾಖಲಿಸಿ ಮೊದಲರ್ಧದಲ್ಲಿ ಭಾರತಕ್ಕೆ ಮುನ್ನಡೆ ನೀಡಿದರು.
ಎರಡನೇ ಗೋಲನ್ನು ಸಂಗೀತಾ ಕುಮಾರಿ 37ನೇ ನಿಮಿಷದಲ್ಲಿ ದಾಖಲಿಸಿ ನಂತರ 65ನೇ ನಿಮಿಷದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಸಂಗೀತ 4-0 ಗೋಲುಗಳ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.