ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ 5 ನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಕನ್ನಡಿಗ ಕೆಎಲ್ ರಾಹುಲ್ ತಮ್ಮ ಚೊಚ್ಚಲ ದ್ವಿಶತಕಕ್ಕೆ ಕೇವಲ ಒಂದು ರನ್ ನಿಂದ ವಂಚಿತರಾದರು.
ಭಾರತ 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 391 ರನ್ ಗಳಿಸಿದ್ದು, ಮೂರನೇ ದಿನವಾದ ಇಂದು 3 ವಿಕೆಟ್ ಕಳೆದುಕೊಂಡು 300 ರನ್ ಗಳಿಸಿದ್ದು, 16 ಬೌಂಡರಿ ಹಾಗೂ 3 ಸಿಕ್ಸರ್ ನಿಂದ 199 ರನ್ ಗಳಿಸಿದ ರಾಹುಲ್ ರಶೀದ್ ಅವರ ಬೌಲಿಂಗ್ ನಲ್ಲಿ ಬಟ್ಲರ್ ಗೆ ಕ್ಯಾಚ್ ನೀಡುವ ಮೂಲಕ ಅವರ ಚೊಚ್ಚಲ ದ್ವಿಶತಕ ಕೈತಪ್ಪಿತು.
ಕೊಹ್ಲಿ 15, ಪೂಜಾರ 16 ರನ್, ಪಾರ್ಥೀವ್ ಪಟೇಲ್ 71, ಇದೀಗ ಕರಣ್ ನಾಯರ್ 71 ಹಾಗೂ ಮುರುಳಿ ವಿಜಯ್ 17 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.