ಲಖನೌ: ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಜೂನಿಯರ್ ಹಾಕಿ ತಂಡವು ಫೈನಲ್ ನಲ್ಲಿ ಬೆಲ್ಜಿಯಂ ತಂಡವನ್ನು ಸೋಲಿಸುವ ಮೂಲಕ ವಿಶ್ವಕಪ್ ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಈ ಮೂಲಕ 15 ವರ್ಷಗಳ ಬಳಿಕ ವಿಶ್ವಕಪ್ ಗೆದ್ದ ಭಾರತ, ಬೆಲ್ಜಿಯಂ ತಂಡವನ್ನು 2-1 ಗೋಲುಗಳಿಂದ ಸೋಲಿಸಿದೆ. ಈ ಹಿಂದೆ ಭಾರತ 2001ರಲ್ಲಿ ಈ ಸಾಧನೆ ಮಾಡಿದ್ದು, ಇದೀಗ ಮತ್ತೆ ಚಾಂಪಿಯನ್ ಸ್ಥಾನ ಗಳಿಸಿದೆ.