ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಪೋಲಿಸ್ ಕ್ರೀಡಾಕೂಟ ತುಂಬಾ ಸಂಭ್ರಮ,ಸಡಗರದಿಂದಾ ನಡೆಯುತ್ತಿದೆ.ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ಪ್ರತಿ ಪೋಲಿಸ್ ಠಾಣೆಯ ಸಿಬ್ಬಂಧಿಗಳು ಭಾಗವಹಿಸಿ ಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ.ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ಪೇದೆ ಮತ್ತು ಮುಖ್ಯ ಪೇದೆಗಳಿಗೆ ಜಿಲ್ಲಾ ಎಸ್ವಿ ಬಂಪರ್ ಆಫರ್ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪೋಲಿಸ್ ಕ್ರೀಡಾಕೂಟ ತುಂಬಾ ಜೋರಾಗಿಯೇ ನಡೆಯುತ್ತಿದೆ. ಜಿಲ್ಲೆಯ ಪ್ರತಿಯೊಂದು ಪೋಲಿಸ್ ಠಾಣೆಯ ಸಿಬ್ಬಂಧಿಗಳು ಮತ್ತು ಅವರ ಕುಟುಂಬದ ಸದಸ್ಯರು ಪ್ರತಿಯೊಂದು ಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ. ಜಿಲ್ಲೆಯ ಸಿಗಂ ಎಂದೂ ಖ್ಯಾತಿ ಪಡೆದಿರುವ ಜಿಲ್ಲಾ ಎಸ್ವಿ ಅಣ್ಣಾಮಲೈ ಅವರು ಪೋಲಿಸ್ ಇಲಾಖೆಯ ಸಿಬ್ಬಂದಿಗಳಲ್ಲಿ ಚುರುಕು ಮತ್ತು ವೇಗಾ ತರುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಾನೆ ಇದ್ದಾರೆ. ಪೋಲಿಸ್ ಇಲಾಖೆಯ ಕ್ರೀಡಾಕೂಟದಲ್ಲಿ ಜಿಲ್ಲೆಯ ಪ್ರತಿ ಪೋಲಿಸ್ ಠಾಣೆಯ ಪೇದೆ ಮತ್ತು ಮುಖ್ಯ ಪೇದೆಗಳಿಗೆ ಎಸ್ವಿ ಅಣ್ಣಮಲೈ ಬಂಪರ್ ಆಫರ್ ನೀಡಿದ್ದಾರೆ.
ಏಪ್ರಿಲ್ ನಲ್ಲಿ ಸಾಮಾನ್ಯ ವರ್ಗಾವಣೆ ಇಲಾಖೆಯಲ್ಲಿ ನಡೆಯುತ್ತದೆ.ನಿಮ್ಮಗೆ ಯಾವ ಪೋಲಿಸ್ ಠಾಣೆ ಬೇಕು ಆ ಠಾಣೆಗೆ ವರ್ಗಾವಣೆ ಮಾಡಿಕೊಡುತ್ತನೆ ಆದ್ರೆ 4 ತಿಂಗಳಲ್ಲಿ 5 ಕೆ.ಜಿ ತೂಕ ಇಳಿಸಿಕೊಳ್ಳಲೇ ಬೇಕು.ತೂಕವನ್ನು ಇಳಿಸಿಕೊಂಡರೇ ಪಕ್ಕಾ ನೀವು ಕೇಳಿದ ಕಡೆ ವರ್ಗಾವಣೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.ತಮ್ಮ ಆರೋಗ್ಯ ಚೆನ್ನಾಗಿ ಕಾಪಾಡಿಕೊಂಡರೇ ಸಮಾಜವನ್ನು ಚೆನ್ನಾಗಿ ಕಾಪಾಡುತ್ತಾರೆ ಎಂಬ ನಂಬಿಕೆಯಿಂದಾ ಈ ಪ್ರಯೋಗ ಮಾಡಿದ್ದಾರೆ. ಅವರು ಇಲಾಖೆಗೆ ಮಾತ್ರ ಆಸ್ತಿಯಲ್ಲ ಸಮಾಜ ಆಸ್ತಿ.ಒಂದು ಠಾಣೆಯಲ್ಲಿ ಒಬ್ಬರೂ ಈ ರೀತಿ ಮಾಡಿದರೇ ಠಾಣೆಯ ಎಲ್ಲಾ ಸಿಬ್ಬಂದಿಗಳು ತಮ್ಮ ಫೀಟ್ ನೆಸ್ ನಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರೇರಣೆ ಆಗುತ್ತೆ. ಈಗಾಗಲೇ ತಮ್ಮ ಕಚೇರಿಯಲ್ಲಿ ತೂಕದ ಯಂತ್ರವನ್ನು ತಂದೂ ಇರಿಸಲಾಗಿದ್ದು ತೂಕ ಮಾಡುವ ಪ್ರಕ್ರಿಯೇ ಈಗಾಗಲೇ ಚಾಲನೆ ನೀಡಲಾಗಿದೆ.
ಪಿಎಸ್ ಐ ಗಳು ತಮ್ಮ ತೂಕವನ್ನು ಇಳಿಸಿಕೊಂಡರೇ ಐಜಿ ಅವರಿಗೆ ನಾನು ಅವರ ಪರವಾಗಿ ಒತ್ತಡ ಹಾಕುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾರೆ… ಇನ್ನು ಈ ನೂತನ ಪ್ರಯೋಗಕ್ಕೆ ಜಿಲ್ಲೆಯ ಎಲ್ಲಾ ಪೇದೆಗಳು ಮತ್ತು ಮುಖ್ಯ ಪೇದೆಗಳು ಸೈ ಎಂದಿದ್ದು ಇಲಾಖೆಯಲ್ಲಿ ಇದು ವಿನೂತನ ಪ್ರಯೋಗವಾಗಿದೆ.ತೂಕ ಇಳಿಸಿಕೊಂಡರೇ ಕೇಳಿದ ಕಡೆ ವರ್ಗಾವಣೆ ಎಂಬ ಮಾತು ನೇರಾ ಎಸ್ಪಿ ಅವರೇ ಹೇಳಿರೋದರಿಂದ ದಪ್ಪಗಿರುವ ಪೇದೆಗಳು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ತೋಡಗಿದ್ದಾರೆ. ಇದರಿಂದ ಪ್ರತಿಯೊಬ್ಬರಿಗೂ ಖುಷಿಯಾಗಿದ್ದು ನಾವು ಅಂದುಕೊಂಡ ಕಡೆ ಕೆಲಸ ಮಾಡಬಹುದು ಎಂದು ತೂಕ ಇಳಿಸುವ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.ಇನ್ನು ಎಸ್ಪಿ ಅವರ ನೂತನ ಪ್ರಯೋಗಕ್ಕೆ ಸಾರ್ವಜನಿಕರಿಂದ ಪ್ರಶಂಸೆ ಹರಿದು ಬರುತ್ತಿದ್ದು, ಇಲಾಖೆ ಇನ್ನಷ್ಟು ಚುರುಕು ಮತ್ತು ವೇಗಾ ಆಗಲು ಇದು ತುಂಬಾ ಉಪಯುಕ್ತವಾಗಿದ್ದು, ನಿರಂತರ ಈ ರೀತಿಯಾ ಪ್ರಯೋಗಗಳು ನಡೆಯುತ್ತಿದ್ದರೇ ಪೋಲಿಸ್ ಸಿಬ್ಬಂದಿಗಳು ಆರೋಗ್ಯ ಸುಧಾರಿಸುತ್ತೆ ಮತ್ತು ಇನ್ನು ವೇಗಾವಾಗಿ ಸಾಗಲು ಅನುಕೂಲ ಆಗುತ್ತೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆಯಾಗಿ ಎಸ್ಪಿ ಅಣ್ಣಮಲೈ ಅವರು ಈ ರೀತಿಯಾ ಪ್ರಯೋಗ ಈ ಹಿಂದೇ ಉಡುಪಿಯಲ್ಲಿಯೂ ಮಾಡಿದ್ರು.ಅಲ್ಲಿ 13 ಜನರು ತೂಕ ಇಳಿಸಿಕೊಂಡು ಅವರು ಕೇಳಿದ ಕಡೆ ವರ್ಗಾವಣೆ ಮಾಡಿಕೊಟ್ಟಿದ್ರು. ಆದ್ರೆ ಚಿಕ್ಕಮಗಳೂರಲ್ಲಿ ಎಷ್ಟು ಜನ ತೂಕ ಇಳಿಸಿಕೊಂಡು ತಾವು ಅಂದುಕೊಂಡ ಠಾಣೆಗೆ ಕೆಲಸಕ್ಕೆ ಹೋಗ್ತಾರೆ ಎಂಬುದನ್ನು ಏಪ್ರಿ ತಿಂಗಳ ನಂತರ ನೋಡಬೇಕಿದೆ.