News Kannada
Wednesday, February 01 2023

ಕ್ರೀಡೆ

ಮೋದಿ ಕನಸಿನ ಯೋಜನೆ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಜ್ಜು!

Photo Credit :

ಮೋದಿ ಕನಸಿನ ಯೋಜನೆ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಸಜ್ಜು!

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ  ನಿರ್ಮಾಣಕ್ಕೆ ಗುಜರಾತ್ ಕ್ರಿಕೆಟ್ ಮಂಡಳಿ ಅಡಿಗಲ್ಲು ಹಾಕಿದೆ.

ಸುಮಾರು 49 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದ ಕ್ರೀಡಾಂಗಣ ಇನ್ಮುಂದೆ 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡಿಯಂ ಆಗಿ ಪರಿವರ್ತನೆಗೊಳ್ಳಲಿದೆ. ಸುಮಾರು 700 ಕೋಟಿ ರೂ. ವೆಚ್ಚದ ಮಹಾಯೋಜನೆ ಇದಾಗಿದ್ದು, 2 ವರ್ಷಗಳಲ್ಲಿ ಮೊಟೆರಾದ ಕ್ರೀಡಾಂಗಣ ಸಜ್ಜಾಗುವ ನಿರೀಕ್ಷೆ ಇದೆ. ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಸಂಪೂರ್ಣವಾಗಿ ನೆಲಸಮಗೊಳಿಸಲಾಗುತ್ತದೆ.

ಮೋದಿ ಗುಜರಾತ್ ಕ್ರಿಕೆಟ್ ಸಂಸ್ಥೆ (ಜಿಸಿಎ) ಅಧ್ಯಕ್ಷರಾಗಿದ್ದಾಗ ಈ ಕ್ರೀಡಾಂಗಣದ ನೀಲನಕ್ಷೆಯನ್ನು ರೂಪಿಸಲಾಗಿತ್ತು. ಹಾಲಿ ಅಧ್ಯಕ್ಷ ಅಮಿತ್ ಷಾ ಈ ಕ್ರೀಡಾಂಗಣ ನಿರ್ವಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮೆಲ್ಬೋರ್ನ್ ಕ್ರೀಡಾಂಗಣದ ವಾಸ್ತುವಿನ್ಯಾಸ ರೂಪಿಸಿದ್ದ ‘ಪಾಪ್ಯುಲಸ್’ ಸಂಸ್ಥೆಯೇ ಈ ಕ್ರೀಡಾಂಗಣದ ವಿನ್ಯಾಸಕನಾಗಿದೆ. ಲಾರ್ಸನ್ ಆಂಡ್ ಟಬೋ ಕಂಪನಿ ಕಾಮಗಾರಿ ವಹಿಸಿಕೊಂಡಿದೆ. ಹೊಸ ಸ್ಟೇಡಿಯಂನಲ್ಲಿ 76 ಕಾಪೋರೇಟ್ ಬಾಕ್ಸ್ಗಳು ಇರಲಿವೆ. 3 ಅಭ್ಯಾಸ ಮೈದಾನ, 4 ಡ್ರೆಸ್ಸಿಂಗ್ ರೂಮ್ 50-55 ರೂಮ್ ಒಳಗೊಂಡ ಕ್ಲಬ್ಹೌಸ್, ಈಜುಕೊಳ ಮತ್ತು ಒಳಾಂಗಣ ಕ್ರಿಕೆಟ್ ಅಕಾಡೆಮಿ ಇರಲಿದೆ. ಒಟ್ಟಾರೆ 63 ಎಕರೆ ವಿಸ್ತೀರ್ಣದ ಕ್ರಿಕೆಟ್ ಕ್ಯಾಂಪಸ್ ಇದಾಗಿರುತ್ತದೆ.

 

See also  ಕ್ರಿಸ್ಟಿಯಾನೊ ರೊನಾಲ್ಡೊ ಕೋವಿಡ್-19ನಿಂದ ಚೇತರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು