ಟೀಂ ಇಂಡಿಯಾದ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನ ತಂಡದ ಎಲ್ಲಾ ಹತ್ತು ವಿಕೆಟ್ ಗಳನ್ನು ಟೆಸ್ಟ್ ಕ್ರಿಕೆಟ್ ನ ಒಂದೇ ಇನ್ನಿಂಗ್ಸ್ ನಲ್ಲಿ ಪಡೆದು ವಿಶ್ವ ದಾಖಲೆಯನ್ನು ಮಾಡಿದ್ದು, ಇಂದಿಗೆ ಈ ಸಾಧನೆಗೆ 18 ವರ್ಷಗಳಾಗಿವೆ.
ದೆಹಲಿಯ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತದ ಅನಿಲ್ ಕುಂಬ್ಳೆ ಅವರು 1999ರಲ್ಲಿ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್ ನ ಎಲ್ಲಾ ಹತ್ತು ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಜಿಮ್ಮಿ ಲೇಕರ್ 1956 ರಲದಲಿ ಮಾಡಿದ್ದ ವಿಶ್ವ ದಾಖಲೆಯನ್ನು ಹಿಂದಿಕ್ಕಿದರು.
ಈ ಪಂದ್ಯದಲ್ಲಿ ಬಾರತ ತಂಡವು ಪಾಕ್ ಗೆ 420 ರನ್ ಗಳ ಟಾರ್ಗೆಟ್ ನೀಡಿದ್ದು, ಅನಿಲ್ ಕುಂಬ್ಳೆ ಅವರ ಮಾರಕ ದಾಳಿಗೆ ತತ್ತರಿಸಿದ ಪಾಕ್ ತಂಡ ಕೇವಲ 207 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು.
1999ರ ಫೆಬ್ರವರಿ 7ರಂದು ಅಂದರೆ ಇಂದಿಗೆ 18 ವರ್ಷಗಳ ಹಿಂದೆ ಅನಿಲ್ ಕುಂಬ್ಳೆ ಈ ವಿಶ್ವ ದಾಖಲೆಯ ಸಾಧನೆ ಮಾಡಿದ್ದು, ನಂತರ ಯಾವುದೇ ಆಟಗಾರನಿಗೆ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.