ಬೆಳ್ತಂಗಡಿ: ಮಂಗಳೂರಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆದ 9ನೇ ವೆಸ್ಟರ್ನ್ ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ 2016 ಕರಾಟೆ ಸ್ವರ್ಧಾಕೂಟದಲ್ಲಿ ಆಲದಪದವು ಅಕ್ಷರ ಭಾರತಿ ಆಂಗ್ಲ ಮಾಧ್ಯಮ ಶಾಲೆಯಿಂದ 7ನೇ ತರಗತಿಯ ಶೋನಿಕ.ವಿ.ಆರ್.ಬಂಗೇರ ಹನ್ನೋಂದನೇ ವಯೋಮಿತಿಯ ಹುಡುಗಿಯರ ಕುಮಿತೆ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಗಳಿಸಿದ್ದಾರೆ.
8ನೇ ತರಗತಿಯ ಶೋಭಿತ್.ವಿ.ಆರ್.ಬಂಗೇರ ಹದಿಮೂರು ವಯೋಮಿತಿಯ ಹುಡುಗರ ಕುಮಿತೆ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಗಳಿಸಿ ಶಾಲೆಗೂ ಕರಾಟೆ ಸಂಸ್ಥೆಗೂ ಕೀರ್ತಿ ತಂದಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿ ಗೌರವ ನೀಡಿದೆ. ಇವರುಗಳು ಇನ್ಸ್ಟಿಟೂಟ್ ಆಫ್.ಆರ್.ವಿ ಟೈಗರ್ ಮಾರ್ಷಲ್ ಆರ್ಟ್ಸ್ ಮಂಗಳೂರು ಸಂಸ್ಥೆಯ ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳು ಮತ್ತು ಸಂಸ್ಥೆ ನಿರ್ದೇಶಕರಾದ ಸೆನ್ಯಾಯಿ ವಸಂತ.ಕೆ.ಬಂಗೇರ ಮತ್ತು ಬಿ.ಕೆ.ರೇಖಾ ಪಾರೆಂಕಿ ಮಂಡತ್ಯಾರು ದಂಪತಿ ಮಕ್ಕಳು.