ಮುಂಬೈ: ಭಾರತ ಡೈರೆಕ್ಟರ್ ಆಗಿ ಟೀಂ ಇಂಡಿಯಾದ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಬಡ್ತಿ ಪಡೆಯಲಿದ್ದು, ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಆಯ್ಕೆ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಟೀಂ ಇಂಡಿಯಾ ಸಿಬ್ಬಂದಿ ವಲಯದಲ್ಲಿ ಐಸಿಸಿ) ಚಾಂಪಿಯನ್ಸ್ ಟ್ರೋಫಿಗೂ ಮುನ್ನ ದೊಡ್ಡ ಮಟ್ಟದ ಬದಲಾವಣೆ ಆಗುವ ಸೂಚನೆ ಕಂಡುಬರುತ್ತಿದ್ದು, ನಿರ್ದೇಶಕನಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯೇ ಅನಿಲ್ ಪಾಲಿಗೆ ಕೊನೆಯದಾಗಲಿದ್ದು ಏಪ್ರಿಲ್ 14ರ ನಂತರ ಡೈರೆಕ್ಟರ್ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಟೀಂ ಇಂಡಿಯಾ ಎ ತಂಡ ಹಾಗೂ 19 ವಯೋಮಿತಿ ತಂಡಕ್ಕೆ ಕೋಚಿಂಗ್ ನೀಡುತ್ತಿರುವ ರಾಹುಲ್ ದ್ರಾವಿಡ್ ಗೆ ರಾಷ್ಟ್ರೀಯ ತಂಡದ ಕೋಚಿಂಗ್ ನೀಡುವ ಕುರಿತು ಮಾತುಕತೆ ನಡೆಯುತ್ತಿದೆ.