ಪುತ್ತೂರು : ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ರಿ ಮತ್ತು ಶ್ರೀ ವಿಷ್ಣು ಫ್ರೆಂಡ್ಸ್ ಆರ್ಲಪದವು ಇದರ ಜಂಟಿ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಶ್ರೀವಿಷ್ಣು ಟ್ರೋಫಿ 2017 ಪಾಣಾಜೆ ಶಾಲಾ ಮೈದಾನದಲ್ಲಿ ಮಾ 11 ಶನಿವಾರದಂದು ರಂದು ನಡೆಯಿತು.
ಸಮಾಜವನ್ನು ಗೌರವದಿಂದ ಕಾಣಬೇಕು ಆಗ ಸಮಾಜ ನಮಗೆ ಗೌರವ ಕೊಡುತ್ತದೆ. ನಾವು ಮಾಡುವ ಕಾಯಕವನ್ನು ಯಾವುದೇ ವಂಚನೆ ಇಲ್ಲದೆ ನಿಸ್ವಾರ್ಥತೆಯಿಂದ ಮಾಡುವುದರ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು ಆಗ ನಮ್ಮನ್ನು ಸಮಾಜ ಗುರುತಿಸುತ್ತದೆ ಎಂದು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್.ಅಂಗಾರ ಹೇಳಿದರು. ಮಂಗಳೂರು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಬಡ್ಡಿ ಆಟವು ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತಿತ್ತು ಆದರೆ ಈಗ ಅದಕ್ಕೆ ಇಂತಹ ಸಂಘಟನೆಯ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸುವ ಮೂಲಕ ಅವರಿಗೆ ಫ್ರೋತ್ಸಾಹ ದೊರಕುವ ಮೂಲಕ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕಂಡು ಬರುತ್ತಿರುವ ಕ್ರೀಡೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಸಂಘಟನೆಯು ಸದೃಢವಾಗಿ ಬೆಳೆದು ಬರಬೇಕಾದರೆ ಅದು ಪಕ್ಷಾತೀತವಾಗಿರಬೇಕು ಅದು ಈ ವಿದ್ಯಾಶ್ರೀ ಫ್ರೆಂಡ್ಸ್ ಮತ್ತು ವಿಷ್ಣು ಫ್ರೆಂಡ್ಸ್ ಆಯೋಜಿಸಿರುವ ಕಾರ್ಯಕ್ರಮವನ್ನು ಕಂಡಾಗ ಅರಿವಾಗುತ್ತದೆ. ಎಲ್ಲಾ ಪಕ್ಷದವರನ್ನು ಸೇರಿಸಿಕೊಂಡು ಸೌಹಾರ್ದಯುತವಾಗಿ ಕಾರ್ಯಕ್ರಮವನ್ನು ದೊಡ್ಡ ಮಟ್ಟಿನಲ್ಲಿ ಆಯೋಜಿಸಿದ್ದಾರೆ ಯಶಸ್ಸನ್ನು ಕಂಡಿದ್ದಾರೆ ಇದು ಶ್ಲಾಂಘನೀಯ ಎಂದರು.
ದ.ಕ.ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸಂಚಾಲರಾದ ಭಾಸ್ಕರ್ ಆಚಾರ್ಯ ಹಿಂದಾರ್, ಸಾಂದೀಪನಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಮಾಲ ವಿ ಎನ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕೆ.ಪಿ.ಸಿ.ಸಿ ಕಿಸಾನ್ ಘಟಕ ಬೆಂಗಳೂರು ವಕ್ತಾರರಾದ ನವೀನ್ ಕುಮಾರ್ ರೈ ಚೆಲ್ಯಡ್ಕ, ನ್ಯಾಯವಾದಿ ಕೃಪಾಶಂಕರ, ಎಣ್ಮಕಜೆ ಗ್ರಾ.ಪಂ.ಸದಸ್ಯೆ ಮಲ್ಲಿಕಾ ಜೆ ರೈ, ನವೋದಯ ಪ್ರೌಢ ಶಾಲೆಯ ದೈ.ಶಿ.ಶಿಕ್ಷಕ ದಯಾನಂದ ರೈ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ, ಅನಿಲ್ ಕುಮಾರ್ ರೈ, ಸದಾಶಿವ ರೈ ಸೂರಂಬೈಲು, ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಮಾಧವ ಮಣಿಯಾಣಿ ನಡುಕಟ್ಟ, ಶಿವಾನಂದ ಮಣಿಯಾಣಿ ನಡುಕಟ್ಟ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ : ನಾಟಿವೈದ್ಯ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಆನಂದ ಬಲ್ಯಾಯ ದೇವಸ್ಯ, ಅಬ್ದುಲ್ಲ ಸಿ.ಕೆ, ಮಾಜಿ ರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಭಂಡಾರಿ, ಕಬಡ್ಡಿ ಸಂಘಟಕರಾದ ಜಗನ್ನಾಥ ಶೆಟ್ಟಿ ಪುದ್ದೊಟ್ಟು ಇವರುಗಳಿಗೆ ಸಭಾ ಸಮ್ಮುಖದಲ್ಲಿ ಮಾಲೆಹಾಕಿ, ಫಲಪುಷ್ಪನೀಡಿ,ಶಾಲು ಹೊದಿಸಿ ಸನ್ಮಾನಿಸಲಾಯಿತು.
ಶ್ರೀಹರಿ ನಡುಕಟ್ಟ ಸ್ವಾಗತಿಸಿದರು. ಶ್ರೀಪ್ರಸಾದ್ ನಡುಕಟ್ಟ ಪಾಸ್ತಾವಿಕವಾಗಿ ಮಾತನಾಡಿದರ. ಪ್ರಕಾಶ್ ಕುಲಾಲ್ ಆರ್ಲಪದವು ವಂದಿಸಿದರು. ಚಂದ್ರಶೇಖರ್ ರೈ ಕೋಟೆ ಕಾರ್ಯಕ್ರಮ ನಿರ್ವಹಿಸಿದರು. ಆರಂಭದಲ್ಲಿ ಶ್ರೀ ಚಾಮುಂಡಿ ವಿಷ್ಣುಮೂರ್ತಿ ದೈವಸ್ಥಾನ ಕೋಟೆ ಇದರ ಮೊಕ್ತೇಸರರಿಂದ ಟ್ರೋಫಿ ಉದ್ಘಾಟನೆಗೊಂಡು ಆರ್ಲಪದವಿನ ಪ್ರಮುಖ ಬೀದಿಗಳಲ್ಲಿ ಟ್ರೋಫಿ ಮೆರವಣಿಗೆ ನಡೆಯಿತು. ಗೊಂಬೆ ನೃತ್ಯ ಹಾಗೂ ಪಲ್ಲವಿ ತಂಡದ ಮೋಕೆದ ಕಲಾವಿದೆರ್ ಕಾರ್ಲ ಇವರಿಂದ ಪಿರ ಬನ್ನಗ ತುಳು ಹಾಸ್ಯಮಯ ಸಾಮಾಜಿಕ ನಾಟಕ ಗಮನಸೆಳೆಯಿತು.
ಸಮಾರೋಪ ಸಮಾರಂಭ : ತಾ.12 ರಂದು ಆದಿತ್ಯವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಇದರ ನಿರ್ದೇಶಕರಾದ ಮಲ್ಲಿಕಾ ಪಿ ಪಕಳ ಮಲಾರಬೀಡು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ಟ್ರೋಫಿ ಕೊಟ್ಟು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಕ್ಕಳ ಮಲಾರಬೀಡು, ಪಾಣಾಜೆ ಗ್ರಾ.ಪಂ.ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ, ಪುಷ್ಪ ರಾಜ್ ಶೆಟ್ಟಿ ಕೋಟೆ, ಸದಾಶಿವ ರೈ ಸೂರಂಬೈಲು, ಮಾದವ ಮಣಿಯಾಣಿ, ಲಕ್ಷ್ಮೀನಾರಾಯಣ ರೈ ಕೆದಂಬಾಡಿ , ಜಯಕುಮಾರ್ ರೈ ಕೋಟೆ, ವಿದ್ಯಾಶ್ರೀ ಫ್ರೆಂಡ್ಸ್ ಟ್ರಸ್ಟ್ನ ಸಂಚಾಲಕರು, ಅಧ್ಯಕ್ಷರು, ಸರ್ವಸದಸ್ಯರು ಉಪಸ್ಥಿತರಿದ್ದರು.