ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ಬಾರ್ಡರ್– ಗವಾಸ್ಕರ್ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಭಾರತ 2–1ರ ಅಂತರದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ 4 ಟೆಸ್ಟ್ ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ.
ಗೆಲುವಿನ ಗುರಿ 106 ರನ್ ಗಳನ್ನು ಬೆನ್ನತ್ತಿದ ಭಾರತ ಆರಂಭದಲ್ಲಿ ಮುರಳಿ ವಿಜಯ್ ಮತ್ತು ಪೂಜಾರ ಅವರ ವಿಕೆಟ್ ಕಳೆದುಕೊಂಡಿತು. ಕೆ.ಎಲ್ ರಾಹುಲ್ ಮತ್ತು ನಾಯಕ ರಹಾನೆ ಅವರ ಉತ್ತಮ ಬ್ಯಾಟಿಂಗ್ ನಿಂದ ಟೀಂ ಇಂಡಿಯಾ ಗೆಲುವನ್ನು ದಾಖಲಿಸಿತು.
ರಹಾನೆ ತಾಳ್ಮೆಯ ನಾಯಕನ ಆಟವಾಡಿ 38 ರನ್ ಗಳಿಸಿದರೆ, ರಾಹುಲ್ ಆಕರ್ಷಕ 51 ರನ್ ಸಿಡಿಸಿದರು.
ಸ್ಕೋರ್:
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 300/10
ಭಾರತ ಮೊದಲ ಇನಿಂಗ್ಸ್: 332/10
ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್: 137/10
ಭಾರತ ಎರಡನೇ ಇನಿಂಗ್ಸ್: 106/2
ಭಾರತಕ್ಕೆ ಸರಣಿ ಗೆಲುವು