ಹೊಸದಿಲ್ಲಿ: ಐಸಿಸಿ ಬಿಸಿಸಿಐ ನಡುವಿನ ಸಂಘರ್ಷ ತಾರಕ್ಕೇರಿದ್ದು, ದುಬೈನಲ್ಲಿ ನಡೆದ ಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಹಣಕಾಸು ಹಂಚಿಕೆಗೆ ಹೊಸ ಮಾದರಿ ಜಾರಿ ತಂದಿದ್ದು ಅದರನುಸಾರ ಹೆಚ್ಚುವರಿ 100 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 643 ಕೋಟಿ ರು.) ನೀಡುವ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿದೆ.
ಶಶಾಂಕ್ ಮನೋಹರ್ ನಮಗೆ ಹೆಚ್ಚುವರಿ ಹಣ ನೀಡುವುದಾಗಿ ಪ್ರಸ್ತಾಪಿಸಿದ್ದು ನಿರ್ದಿಷ್ಟ ಸಮಯದೊಳಗೆ ನಿರ್ಧಾರ ತಿಳಿಸುವಂತೆ ಸೂಚಿಸಿದ್ದಾರೆ. ಆದರೆ ನಾವು ಅವರ ಪ್ರಸ್ತಾಪವನ್ನು ತಿರಸ್ಕರಿಸುತ್ತಿದ್ದೇವೆ. ಹೀಗಿದ್ದಾಗ ಮತ್ತೆ ನಿರ್ಧಾರ ತಿಳಿಸುವ ಅವಶ್ಯಕತೆ ಇಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.