ಮುಂಬೈ: ಖ್ಯಾತ ಟೆನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾರ ಅಶ್ಲೀಲ ಫೋಟೋವನ್ನು ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ಮರ್ಮಾ ಸಾಮಾಜಿಕ ಜಾಲತಾಣ ಇನ್’ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ತಮ್ಮ ಮುಂದಿನ ಕಿರು ಚಿತ್ರ “ಮೇರಿ ಬೇಟಿ ಸನ್ನಿ ಲಿಯೋನ್ ಬನ್ ನಾ ಚಾಹ್ತೀ ಹೇ” ಚಿತ್ರದ ಪ್ರಚಾರಕ್ಕಾಗಿ ಉದಾಹರಣೆಯೊಂದನ್ನು ನೀಡುತ್ತಾ ಸಾನಿಯಾ ಮಿರ್ಜಾರ ಅಶ್ಲೀಲ ಭಂಗಿಯ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆರ್.ಜಿ.ವಿ ಅವರ ಈ ವರ್ತನೆಗೆ ಇದೀಗ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.