ಮ್ಯಾಡ್ರಿಡ್: ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ತೆರಿಗೆ ವಂಚನೆ ಪ್ರಕರಣದಲ್ಲಿ ಸಿಲುಕಿಹಾಕಿಕೊಂಡು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಮುಂದಿನ ದಿನಗಳಲ್ಲಿ ತಂಡವನ್ನು ತ್ಯಜಿಸುವ ನಿರ್ಧಾರವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.
32 ವರ್ಷದ ರೊನಾಲ್ಡೊ ರೂ 106 ಕೋಟಿ ತೆರಿಗೆ ವಂಚನೆ ಮಾಡಿದ್ದಾರೆನ್ನಲಾಗುತ್ತಿದ್ದು, ಅವರು ಜುಲೈ 31ರಂದು ಮ್ಯಾಡ್ರಿಡ್ ಕೋರ್ಟ್ಗೆ ಹಾಜರಾಗಿ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಲಾಗಿದೆ. ಆರೋಪ ಸಾಬೀತಾಗುವವರೆಗೂ ಯಾರೂ ಅಪರಾಧಿಯಲ್ಲ. ಮಾಧ್ಯಮಗಳು ರೊನಾಲ್ಡೊ ಕುರಿತು ವರದಿ ಮಾಡುವಾಗ ಸಂಯಮ ತೋರಬೇಕು ಎಂದು ಮ್ಯಾಡ್ರಿಡ್ ವಕ್ತಾರರು ಮನವಿ ಮಾಡಿಕೊಂಡಿದ್ದಾರೆ.