News Kannada
Friday, March 31 2023

ಕ್ರೀಡೆ

ರಂಜಾನ್ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ

Photo Credit :

ರಂಜಾನ್ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿ

ನಂಜನಗೂಡು: ರಂಜಾನ್ ಹಬ್ಬದ ಪ್ರಯುಕ್ತ ರೆಹಮಾನಿಯಾ  ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಪಂದ್ಯಾವಳಿ ರೋಚಕವಾಗಿತ್ತಲ್ಲದೆ, ನೆರೆದ ಕ್ರಿಕೆಟ್ ಪ್ರೇಮಿಗಳ ಮನಸೆಳೆಯಿತು. ಪಂದ್ಯಾವಳಿಗೆ  ತಾಲೂಕಿನಾದ್ಯಂತ ಸುಮಾರು 15 ತಂಡಗಳು  ಭಾಗವಹಿಸಿದ್ದವು. ಫೈನಲ್ ನಲ್ಲಿ ನಗರದ ಮೇಹಾರ ಎ. ಮತ್ತು ಕೆ.ಕೆ.ಆರ್. (ಹುಂಡಿ)ತಂಡಗಳ ನಡುವೆ ಜಿದ್ದಾಜಿದ್ದಿ ನಡೆದು ಕೊನೆಗೂ ಮೇಹಾರ ಎ ತಂಡವು 1 ವಿಕೆಟ್ ಗೆಲುವು ಸಾಧಿಸಿ 50 ಸಾವಿರ ನಗದು ಮತ್ತು ಕಪ್ನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ರನ್ನರ್ ಆಪ್ಗೆ ಕೆ.ಕೆ.ಆರ್. ಹುಂಡಿ ತಂಡ ತೃಪ್ತಿಪಟ್ಟುಕೊಳ್ಳುವಂತಾಯಿತು. ರನ್ನರ್ ತಂಡಕ್ಕೆ ನಗದು 25 ಸಾವಿರ ನಗದು ಮತ್ತು ಕಪ್ ನೀಡಲಾಯಿತು.
ಪಂದ್ಯಾವಳಿಯಲ್ಲಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಶಾಸಕ ಕಳಲೆ ಕೇಶವಮೂರ್ತಿ ಅವರು ಕಲೆ ಮತ್ತು ಕ್ರೀಡೆಗೆ ಹೆಸರಾದ ನಂಜನಗೂಡಿನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸೌಹಾರ್ಧತೆಯ ದೃಷ್ಟಿಯಿಂದ ಕ್ರಿಕೆಟ್ ಪಂದ್ಯಾವಳಿ ನಡೆಸಿರುವುದು ಸಂತಸದ ವಿಚಾರವಾಗಿದೆ ಎಂದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್, ತಾ.ಪಂ. ಉಪಾಧ್ಯಕ್ಷ ಗೋವಿಂದರಾಜನ್,  ನಗರಸಭಾ ಸದಸ್ಯ ಮಂಜುನಾಥ್, ಖಾಲಿದ್ ಅಹಮದ್, ಕಾಂಗ್ರೆಸ್ ಮುಖಂಡ ಇಂದನ್ಬಾಬು. ಮಾಜಿ ಆಶ್ರಯ ಸಮಿತಿ ಅಧ್ಯಕ್ಷ ಚಾಮರಾಜು,  ಕಾಂಗ್ರೆಸ್ ಕಾರ್ಮಿಕ ಸಂಘದ ಅಧ್ಯಕ್ಷ ಮಂಜುನಾಥ್,  ತೌಸಿಫ್, ಕ್ರಿಕೆಟ್ ವ್ಯವಸ್ಥಾಪಕ ಆಯೂಬ್ ಖಾನ್, ಸಲ್ಮಾನ್ ಖಾನ್, ಸಯದ್. ವಾಸೀಂ. ಅಸ್ಲಂ. ಪರೀಧ್ ಎನ್.ಕೆ. ಹುಮ್ಮಾರ್,  ಸಯದ್ ವಾಸೀಂ. ಮುಹೀರ್. ಆಶೀಫ್ ಇದ್ದರು.

See also  ರೋಚಕ ಹಣಾಹಣಿಯಲ್ಲಿ ಆರ್.ಸಿ.ಬಿಯನ್ನು ಸೋಲಿಸಿದ ಚೆನ್ನೈ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು