ಮಡಿಕೇರಿ: ಅರೆಪಟ್ಟು ಕಡಂಗ ಗ್ರಾಮದ ಕೊಡಗು ಕ್ರೀಡಾ ಸಂಘದ ವತಿಯಿಂದ 4ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾ ಕೂಟವನ್ನು ಜು.15 ಮತ್ತು 16 ರಂದು ಅನ್ನಂಬಿರ ಡಾಲು ಅಪ್ಪಚ್ಚು ಹಾಗೂ ಅವರ ಸಹೋದರರ ಗದ್ದೆಯಲ್ಲಿ ನಡೆಸಲಾಗುವುದೆಂದು ಕೊಡಗು ಕ್ರೀಡಾ ಸಂಘದ ಅಧ್ಯಕ್ಷರಾದ ಷರೀಫ್ ಪೊದ್ದಮಾನಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಅನ್ನಂಬಿರ ಡಾಲು ಅಪ್ಪಚ್ಚು ಉದ್ಘಾಟಿಸಲಿದ್ದು, ರಾಷ್ಟೀಯ ಮತ್ತು ಅಂತರರಾಷ್ಟ್ರೀಯ ಮಹಿಳಾ ಪುಟ್ಬಾಲ್ ಆಟಗಾರ್ತಿಯರಾದ ಪದ್ಮಪ್ರಿಯ ಸಿಂಗೂರ್ ಮತ್ತು ಪುಲಿಯಂಡ ಮಾನಸ ಜೋಯಪ್ಪ, ಭಾಗವಹಿಸಲಿದ್ದಾರೆ.
ಕ್ರೀಡಾ ಕೂಟದಲ್ಲಿ ಸುಮಾರು 40 ತಂಡಗಳು ಭಾಗವಹಿಸಲಿದ್ದು, ಮಕ್ಕಳಿಗಾಗಿ ಪುಟ್ಬಾಲ್ ಹಾಗೂ ವೈವಿಧ್ಯಮಯ ಆಟೋಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 10ನೇ ತರಗತಿಯಲ್ಲಿ ಆತಿ ಹೆಚ್ಚು ಅಂಕ ಗಳಿಸಿದ ಕೊಡಗಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಷರೀಫ್ ಪೊದ್ದಮಾನಿ ತಿಳಿಸಿದರು.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ತಂಡಗಳು ಹಾಗೂ ಕ್ರೀಡಾಪಟುಗಳು ಜು.13ರ ಒಳಗಾಗಿ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ : 87625 85777, 98438 15049 ನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷರಾದ ಎಂ.ಯು. ಮೊಹಮ್ಮದ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಭಿಮಾನಿ ಸಂಘದ ಅಧ್ಯಕ್ಷರಾದ ಮುನೀರ್ ಮಾಚಾರ್, ಸಹ ಕಾರ್ಯದರ್ಶಿ ಸಮೀರ್ ಹಾಗೂ ಸದಸ್ಯರಾದ ಸಜೀರ್ ಉಪಸ್ಥಿತರಿದ್ದರು. ಫೋಟೋ :: ಕ್ರೀಡಾಕೂಟ
======================================