News Kannada
Thursday, December 01 2022

ಕ್ರೀಡೆ

ಕಡಂಗದಲ್ಲಿ ಗಮನ ಸೆಳೆದ ಕೆಸರು ಗದ್ದೆ ಕ್ರೀಡಾಕೂಟ - 1 min read

Photo Credit :

ಕಡಂಗದಲ್ಲಿ ಗಮನ ಸೆಳೆದ ಕೆಸರು ಗದ್ದೆ ಕ್ರೀಡಾಕೂಟ

ಮಡಿಕೇರಿ: ಕಡಂಗದ ಪೊದ್ದುಮಾನಿ ಗ್ರಾಮದ ಅನ್ನಂಬಿರ ಅಪ್ಪಚ್ಚು ಮತ್ತು ಸಹೋದರರ ಗದ್ದೆಯಲ್ಲಿ ಜಿಲ್ಲಾ ಮಟ್ಟದ ‘ಕೊಡಗು ಕಪ್ 2017’ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು.

ಕೆಸರು ಗದ್ದೆಯಲ್ಲಿ ಓಟ, ಫುಟ್ಬಾಲ್ ಆಟ ಸೇರಿದಂತೆ ವೈವಿಧ್ಯಮಯ ಗ್ರಾಮೀಣ ಕ್ರೀಡೆಗಳು ಎರಡು ದಿನಗಳ ಕಾಲ ನಡೆಯಿತು. ವಿವಿಧ ಭಾಗಗಳ ಸುಮಾರು 40 ಕ್ಕೂ ಹೆಚ್ಚು ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.

ಶಾಸಕರಾದ ಕೆ.ಜಿ.ಬೋಪಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮುಕ್ಕಾಟಿರ ಶಿವು ಮಾದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಿ.ಬಿ.ಭಾರತೀಶ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ, ಸ್ಥಳೀಯ ಜಿ.ಪಂ ಸದಸ್ಯರಾದ ಕಿರಣ್ ಕಾರ್ಯಪ್ಪ ಮತ್ತಿತರ ಪ್ರಮುಖರು ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಇದೇ ಸಂದರ್ಭ ಪದ್ಮಿನಿ ಪೊನ್ನಪ್ಪ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು.

See also  ತನ್ನ 37 ಮೊಮ್ಮಕ್ಕಳ ಸಮ್ಮುಖದಲ್ಲೇ ಜಗತ್ತಿನ ಹಿರಿಯ ಟೆನಿಸ್ ಚಾಂಪಿಯನ್ ಆದ 83 ವರ್ಷದ ಆನಾ ಒಬಾರಿಯೋ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು