News Kannada
Tuesday, December 06 2022

ಕ್ರೀಡೆ

ಭಾರತ, ಶ್ರೀಲಂಕಾ ಟೆಸ್ಟ್: ಸರಣಿಯನ್ನು ‘ಕ್ಲೀನ್‌ ಸ್ವೀಪ್‌’ ಮಾಡಿದ ಟೀಂ ಇಂಡಿಯಾ

Photo Credit :

ಭಾರತ, ಶ್ರೀಲಂಕಾ ಟೆಸ್ಟ್: ಸರಣಿಯನ್ನು 'ಕ್ಲೀನ್‌ ಸ್ವೀಪ್‌' ಮಾಡಿದ ಟೀಂ ಇಂಡಿಯಾ

ಕ್ಯಾಂಡಿ: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ 171 ರನ್‌ ಜಯ ಸಾಧಿಸುವ ಮೂಲಕ ಭಾರತ ತಂಡ ಈ ಟೆಸ್ಟ್‌ ಸರಣಿಯನ್ನು ‘ಕ್ಲೀನ್‌ ಸ್ವೀಪ್‌’ ಮಾಡಿದೆ.

ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ ವಿದೇಶಿ ನೆಲದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಬಾರಿ ‘ಕ್ಲೀನ್‌ ಸ್ವೀಪ್‌’ ಮಾಡಿದ ಸಾಧನೆ ಮಾಡಿದೆ.

ಮೊದಲ ಇನಿಂಗ್ಸ್ ನಲ್ಲಿ ಭಾರತ (ಶನಿವಾರ 90 ಓವರ್‌ಗಳಲ್ಲಿ 6ಕ್ಕೆ329) 122.3 ಓವರ್‌ಗಳಲ್ಲಿ 487 ರನ್‌ ಗಳಿಸಿ ಆಲೌಟ್‌ ಆಯಿತು. ಚೈನಾಮನ್ ಬೌಲರ್‌ ಕುಲದೀಪ್ ಯಾದವ್ ಅವರು ಹೆಣೆದ ಸ್ಪಿನ್ ಬಲೆ ಎದುರಾಳಿಗಳನ್ನು ಒತ್ತಡಕ್ಕೆ ಸಿಲುಕಿಸಿದ್ದು, ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ ಕೇವಲ 135 ರನ್‌ಗಳಿಗೆ ಆಲೌಟ್‌ ಆಗಿ ಭಾರತದ ಎದುರು 352 ರನ್‌ಗಳ ಹಿನ್ನಡೆ ಕಂಡಿತ್ತು.

ಮೂರನೇ ದಿನದಾಟ ಸೋಮವಾರ ಆರಂಭಿಸಿದ ಶ್ರೀಲಂಕಾ 74.3 ಓವರ್‌ಗಳಲ್ಲಿ 181 ರನ್‌ ಗಳಿಸಿ ಆಲೌಟ್‌ ಆಗಿದೆ.

ಶ್ರೀಲಂಕಾ ಬ್ಯಾಟಿಂಗ್: ದಿಮುತ್ ಕರುಣರತ್ನೆ 16, ಉಪುಲ್‌ ತರಂಗ 07, ಕುಶಾಲ್ ಮೆಂಡಿಸ್‌ 12, ದಿನೇಶ್ ಚಾಂದಿಮಲ್‌ 36, ಏಂಜೆಲೊ ಮ್ಯಾಥ್ಯೂಸ್‌ 35, ನಿರೋಷನ್‌ ಡಿಕ್ವೆಲಾ 41, ದಿಲ್ರುವಾನ್ ಪೆರೇರ 08, ಲಕ್ಷಣ್ ಸಂಡಗನ್‌ 08,ಮಲಿಂದ ಪುಷ್ಪಕುಮಾರ
01, ವಿಶ್ವ ತಿಲಾನ ಫರ್ನಾಂಡೊ ಬ್ಯಾಟಿಂಗ್‌ 04, ಲಾಹಿರು ಕುಮಾರ ಬ್ಯಾಟಿಂಗ್‌ 10

ಭಾರತ ಬೌಲಿಂಗ್: ಆರ್‌.ಅಶ್ವಿನ್‌ 4, ಮೊಹಮ್ಮದ್‌ ಶಮಿ 3, ಉಮೇಶ್‌ ಯಾದವ್‌ 2 , ಕುಲದೀಪ್‌ ಯಾದವ್‌ 1 ವಿಕೆಟ್‌ ಕಬಳಿಸಿದ್ದಾರೆ.

See also  ಡಿ.10 ಕೊಡಗಿನಲ್ಲಿ ಸ್ಪೀಡ್ ಸ್ಟಾರ್ ಗಳ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು