ಮೂಡಿಗೆರೆ: ಒರಿಸ್ಸಾದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ 19ರ ಒಳಗಿನ ವಯೋಮಿತಿ ಬಾಲಕಿಯರ ವಿಭಾಗದ ಕರ್ನಾಟಕ ಕಬಡ್ಡಿ ತಂಡದ ನಾಯಕಿಯಾಗಿ ತಾಲ್ಲೂಕಿನ ಗುತ್ತಿ ಗ್ರಾಮದ ಕುಮಾರಿ ನಿಸರ್ಗ ಅಯ್ಕೆಯಾಗಿದ್ದಾರೆ. ಕುಮಾರಿ ನಿಸರ್ಗ ಪಟ್ಟಣದ ಡಿಎಸ್ ಬಿಳಿಗೌಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ. ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ.
ಬಾಲ್ಯದಿಂದಲೂ ಕಬಡ್ಡಿ ಕ್ರೀಡೆಯಲ್ಲಿ ಅಸಕ್ತಿ ಹೊಂದಿದ್ದ ನಿಸರ್ಗ, ಚಿಕ್ಕಮಗಳೂರು ಅಮೇಚೂರ್ ಕಬಡ್ಡಿ ಅಸೋಶಿಯೇಷನ್ನಲ್ಲಿ ತರಬೇತಿ ಪಡೆದು ಇತ್ತೀಚೆಗೆ ಬೆಂಗಳೂರಿನ ಕಂಠಿರವ ಕ್ರಿಡಾಂಗಣದಲ್ಲಿ ನಡೆದ ಟ್ರಯಲ್ಸ್ನಲ್ಲಿ ರಾಷ್ಟ್ರೀಯ ತಂಡಕ್ಕೆ ಅಯ್ಕೆಯಾಗಿದ್ದರು. ಇವರು ರಾಜ್ಯ ತಂಡವನ್ನು ಸತತ ಮೂರು ಬಾರಿ ಪ್ರತಿನಿಧಿಸಿದ್ದು ಈಗ ನಾಯಕಿಯಾಗಿ ತಂಡವನ್ನು ಮುನ್ನೆಡೆಸಲಿದ್ದಾರೆ.
ಈ ಬಾರಿಯ ರಾಜ್ಯ ತಂಡಕ್ಕೆ ತರಬೇತುದಾರರಾಗಿ ಜಿಲ್ಲೆಯ ದೈಹಿಕ ಶಿಕ್ಷಕ ಕುಮಾರ್ ಅಯ್ಕೆಯಾಗಿದ್ದಾರೆ. ಇವರನ್ನು ಅಮೇಚೂರ್ ಸಂಸ್ಥೆಯ ಜಿಲ್ಲಾದ್ಯಕ್ಷ ರಂಜನ್ ಅಜಿತ್ಕುಮಾರ್, ಕೆ.ಮಂಚೆಗೌಡ, ಜೆ.ಎಸ್.ರಘು, ಶ್ರೀನಿವಾಸ್ ಅಭಿನಂದಿಸಿದ್ದಾರೆ.