News Kannada
Tuesday, December 06 2022

ಕ್ರೀಡೆ

ಭಾರತ 19ರ ಕೆಳಹರೆಯದ ವಿಶ್ವಕಪ್ ಚಾಂಪಿಯನ್

Photo Credit :

ಭಾರತ 19ರ ಕೆಳಹರೆಯದ ವಿಶ್ವಕಪ್ ಚಾಂಪಿಯನ್

ಬೇ ಓವಲ್: ಮನ್ಜೋತ್ ಕಲ್ರಾ ಭರ್ಜರಿ ಶತಕ ಹಾಗೂ ಬೌಲರ್ ಗಳ ಸಂಘಟಿತ ಪ್ರಯತ್ನದಿಂದ ಭಾರತ 19ರ ಕೆಳಹರೆಯದ ವಿಶ್ವಕಪ್ ನ ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗುಬಡಿದು, ನಾಲ್ಕನೇ ಸಲ ಟ್ರೋಫಿ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಇರಶಾನ್ ಪೊರೆಲ್, ಶಿವ ಸಿಂಗ್, ಕಮಲೇಶ್ ನಾಗರ್ಕೊಟಿ ಮತ್ತು ಅಂಕುಲ್ ರಾಯ್ ದಾಳಿಗೆ ತತ್ತರಗೊಂಡು 47.2 ಓವರ್ ಗಳಲ್ಲಿ 216 ರನ್ ಗಳಿಗೆ ಆಲೌಟ್ ಆಯಿತು.

ಇದಕ್ಕೆ ಉತ್ತರಿಸಿದ ಭಾರತಕ್ಕೆ ಮನ್ಜೋತ್ ಕಲ್ರಾ 102 ಎಸೆತಗಳಲ್ಲಿ 101 ರನ್ ಬಾರಿಸಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು. ಕೇವಲ ಎರಡು ವಿಕೆಟ್ ಕಳಕೊಂಡ ಭಾರತ 11.1 ಓವರ್ ಬಾಕಿ ಇರುವಂತೆ ಗೆಲುವನ್ನು ತನ್ನದಾಗಿಸಿಕೊಂಡಿತು.

ಕಪ್ತಾನ ಪೃಥ್ವಿ ಶಾ 19ರ ಕೆಳಹರೆಯದ ವಿಶ್ವಕಪ್ ಗೆದ್ದ ಮೊಹಮ್ಮದ್ ಕೈಫ್(2002), ವಿರಾಟ್ ಕೊಹ್ಲಿ(2008), ಉನ್ಮುಕ್ತ್ ಚಾಂದ್(2012) ಸಾಲಿಗೆ ಸೇರಿದರು.

217 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟುತ್ತಿದ್ದ ಭಾರತಕ್ಕೆ ಶಾ ಮತ್ತು ಕಲ್ರಾ ಭದ್ರ ಅಡಿಪಾಯ ಹಾಕಿಕೊಟ್ಟರು. ಮಳೆಯಿಂದಾಗಿ ಪಂದ್ಯಕ್ಕೆ ಸ್ವಲ್ಪ ಅಡಚಣೆಯಾದರೂ ವಿರಾಮದ ಬಳಿಕ ಬಂದ ಭಾರತದ ಬ್ಯಾಟ್ಸ್ ಮೆನ್ ಗಳು ಆಸ್ಟ್ರೇಲಿಯಾ ಬೌಲರ್ ಗಳನ್ನು ಮೈದಾನದ ಮೂಲೆಮೂಲೆಗೂ ಅಟ್ಟಿದರು.

12ನೇ ಓವರ್ ನಲ್ಲಿ ಶಾ 71 ರನ್ ಮಾಡಿ ನಿರ್ಗಮಿಸಿದರು. ಟೂರ್ನಿಯಲ್ಲಿ ಗರಿಷ್ಠ ರನ್ ಮಾಡಿರುವ ಶುಭ್ಮನ್ ಗಿಲ್ ಮತ್ತು ಕಲ್ರಾ ಜೋಡಿ ಎರಡನೇ ವಿಕೆಟಿಗೆ 60 ರನ್ ಪೇರಿಸಿದರು. ಗಿಲ್ ಕೆಲವೊಂದು ಆಕ್ರಮಣಕಾರಿ ಹೊಡೆತಗಳ ಮೂಲಕ ಗಮನಸೆಳೆದರು.

ಗಿಲ್ ನಿರ್ಗಮನದ ಬಳಿಕ ಪರಮ್ ಉಪ್ಪಲ್ 30 ಎಸೆತಗಳಲ್ಲಿ 30 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

See also  ರಿಯಾಲಿಟಿ ಶೋ 'ನಾಚ್ ಬಲಿಯೆ-8' ನಲ್ಲಿ ಹೆಜ್ಜೆ ಹಾಕಲಿರುವ ಯುವರಾಜ್ ದಂಪತಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು