News Kannada
Friday, October 07 2022

ಕ್ರೀಡೆ

ಕೇವಲ 20 ಎಸೆತಗಳಲ್ಲಿ ಶತಕ ಸಿಡಿಸಿದ ವೃದ್ಧಿಮಾನ್ ಸಾಹಾ - 1 min read

Photo Credit :

ಕೇವಲ 20 ಎಸೆತಗಳಲ್ಲಿ ಶತಕ ಸಿಡಿಸಿದ ವೃದ್ಧಿಮಾನ್ ಸಾಹಾ

ಕೊಲ್ಕತ್ತಾ: ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾ ಅವರು ಶನಿವಾರ ಟಿ-20 ಕ್ರಿಕೆಟಿನಲ್ಲಿ ಕೇವಲ 20 ಎಸೆತಗಳಲ್ಲಿ ಶತಕ ಬಾರಿಸಿ ಆರ್ಭಟಿಸುವುದರೊಂದಿಗೆ ಮುಂದಿನ ಐಪಿಎಲ್ ಗೆ ತಯಾರಿ ನಡೆಸಿದ್ದಾರೆ.

ವೃದ್ದಿಮಾನ್ ಸಾಹಾ ಅವರು ಕೊಲ್ಕತ್ತಾದಲ್ಲಿ ನಡೆಯುತ್ತಿರುವ ಜೆ.ಸಿ. ಮುಖರ್ಜಿ ಟಿ-20 ಸ್ಥಳೀಯ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಮೋಹನ್ ಬಗಾನ್ ಪರವಾಗಿ ಕೇವಲ 20 ಎಸೆತಗಳಲ್ಲಿ 102 ರನ್ ಸಿಡಿಸಿದರು. ಈ ಪಂದ್ಯದಲ್ಲಿ ಬಗಾನ್ ಬಿ.ಎನ್.ಆರ್ ರಿಕ್ರಿಯೇಷನ್ ಕ್ಲಬ್ ತಂಡವನ್ನು 10 ವಿಕೆಟ್ ಗಳಿಂದ ಪರಾಭವಗೊಳಿಸಿತು.

ಈ ಐಪಿಎಲ್ ಋತುವಿನಲ್ಲಿ ಸನ್ ರೈಸರ್ಸ್ ಹೈದಾರಾಬಾದ್ ಪರವಾಗಿ ಆಡಲಿರುವ ಸಾಹಾ ಅವರು 14 ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಿಸಿ ಕೇವಲ ಏಳು ಓವರ್ ಗಳಲ್ಲಿ 152 ರನ್ ಬೆನ್ನಟ್ಟಲು ನೆರವಾದರು.

ಸಾಹಾ ಕೇವಲ 12 ಎಸೆತಗಳಲ್ಲಿ 50 ರನ್ ಬಾರಿಸಿದರು. ಈ ವೇಳೆ ಅವರು ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಬಾರಿಸಿದರು. 20 ಎಸೆತಗಳಲ್ಲಿ ಶತಕ ಪೂರೈಸಿ ತಂಡಕ್ಕೆ ಗೆಲುವು ತಂದಿತ್ತರು.

See also  ಏಷ್ಯಾಕಪ್ ಹಾಕಿ : ಲೀಲಾವತಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು