ರಾತ್ರಿ ಲುಜ್ ಕಿನಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ ನ್ನು ಫ್ರಾನ್ಸ್ ತಂಡ ಮುಡಿಗೇರಿಸಿಕೊಂಡಿತು.
ಕ್ರೊವೇಷ್ಯಾ ತಂಡದ ವಿರುದ್ಧ ನಡೆದ ಪಂದ್ಯಾಟದಲ್ಲಿ ಫ್ರಾನ್ಸ್ ತಂಡವು 4-2 ಗೋಲುಗಳಿಂದ ಕ್ರೊವೇಷ್ಯಾ ತಂಡವನ್ನು ಮಣಿಸಿತು.
ಈ ಮೂಲಕ ಫ್ರಾನ್ಸ್ ಎರಡನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಈ ಟೂರ್ನಿಯಲ್ಲಿ ‘ಕಪ್ಪುಕುದುರೆ’ಯಾಗಿ ಕಣಕ್ಕಿಳಿದಿದ್ದ ಲೂಕಾ ಮಾಡ್ರಿಚ್ ನಾಯಕತ್ವದ ಕ್ರೊವೇಷ್ಯಾ ಬಳಗವು ಮೊದಲ ಸಲ ರನ್ನರ್ಸ್ ಅಪ್ ಆಯಿತು.