ಜಕಾರ್ತ: ಏಶ್ಯನ್ ಗೇಮ್ಸ್ ನ ದಾಖಲೆಯೊಂದಿಗೆ ಭಾರತದ ತೇಜಿಂದರ್ ಪಾಲ್ ಸಿಂಗ್ ಅವರು ಶಾಟ್ ಪುಟ್ ವಿಭಾಗದಲ್ಲಿ ಸ್ವರ್ಣ ಗೆದ್ದುಕೊಂಡು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ತೇಜಿಂದರ್ ಪಾಲ್ ಸಿಂಗ್ ತೂರ್ ಅವರು ಶಾಟ್ ಫುಟ್ ನ ಫೈನಲ್ ನಲ್ಲಿ ಎರಡನೇ ಪ್ರಯತ್ನದಲ್ಲಿ 19.5 ಮೀಟರ್ ದೂರ ಗುಂಡನ್ನು ಎಸೆದಿದ್ದರು. ಮೂರನೇ ಪ್ರಯತ್ನವು ಫೌಲ್ ಆಗಿತ್ತು. ಆದರೆ ನಾಲ್ಕನೇ ಪ್ರಯತ್ನದಲ್ಲಿ 20.75 ಮೀಟರ್ ದೂರ ಎಸೆದು ಏಶ್ಯನ್ ಗೇಮ್ಸ್ ನ ದಾಖಲೆಯೊಂದಿಗೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದರು.