ದುಬೈ: ಏಶ್ಯಾಕಪ್ ನಲ್ಲಿ ಆಡಲು ಇಲ್ಲಿಗೆ ಆಗಮಿಸಿರುವ ಭಾರತ ತಂಡದ ಮಾಜಿ ಕಪ್ತಾನ ಎಂ.ಎಸ್. ಧೋನಿ ಅವರನ್ನು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಭೇಟಿ ಮಾಡಿ ಮಾತುಕತೆ ನಡೆಸಿದರು.
ಧೋನಿ ಮತ್ತು ಮಲಿಕ್ ಭೇಟಿಯ ವಿಡಿಯೋ ಈಗ ವೈರಲ್ ಆಗಿದೆ. ಇಂದಿನಿಂದ ಏಶ್ಯಾಕಪ್ ಆರಂಭವಾಗಲಿದೆ. ಸೆ.19ರಂದು ಭಾರತ ಮತ್ತು ಪಾಕಿಸ್ತಾನ ಪರಸ್ಪರ ಸೆಣಸಲಿದೆ.
ಟೀಂ ಇಂಡಿಯಾದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿದ್ದು, ಮೊದಲ ಪಂದ್ಯದಲ್ಲಿ ಹಾಂಕ್ ಕಾಂಗ್ ವಿರುದ್ಧ ಆಡಲಿದೆ. ಇಂದಿನ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ-ಬಾಂಗ್ಲಾದೇಶ ಎದುರಾಗಲಿದೆ.