ರಾಂಚಿ: ವೇಗಿ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿಯಿಂದ ಕಂಗೆಟ್ಟ ದಕ್ಷಿಣ ಆಫ್ರಿಕಾ ಮೂರನೇ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿದ್ದು, ವಿರಾಟ್ ಕೊಹ್ಲಿ ಪಡೆ ಸರಣಿ ಕ್ಲೀನ್ ಸ್ವೀಪ್ ಮಾಡುವ ಸನಿಹದಲ್ಲಿದೆ.
ಫಾಲೋ ಆನ್ ಪಡೆದಿರುವ ಪ್ರವಾಸಿ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ ಎಂಟು ವಿಕೆಟ್ ಕಕೊಂಡು 132 ರನ್ ಮಾಡಿದೆ. ಥ್ಯೂನಿಸ್ ಡಿ ಬ್ರೂಯಿನ್ 30 ರನ್ ಮತ್ತು ಅನ್ರಿಕ್ ನಾರ್ಟ್ಜೆ(5) ರನ್ ಮಾಡಿ ಕ್ರೀಸಿನಲ್ಲಿದ್ದಾರೆ.
ಶಮಿ ಎರಡನೇ ಇನ್ನಿಂಗ್ಸ್ ನಲ್ಲಿ 10 ರನ್ ನೀಡಿ 3 ವಿಕೆಟ್ ಬಳಿಸಿದರೆ, ಉಮೇಶ್ ಯಾದವ್ ಎರಡು ವಿಕೆಟ್ ಉರುಳಿಸಿದರು.
ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 162 ರನ್ ಗಳಿಗೆ ಆಲೌಟ್ ಆದ ದ.ಆಫ್ರಿಕಾ ಫಾಲೋ ಆನ್ ಪಡೆದುಕೊಂಡಿದೆ. ಇನ್ನೂ 203 ರನ್ ಗಳ ಹಿನ್ನಡೆಯಲ್ಲಿರುವ ಹರಿಣಗಳ ಕೇವಲ ಎರಡು ವಿಕೆಟ್ ಮಾತ್ರ ಬಾಕಿ ಇದೆ.