ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ತಂಡದ ಆಲ್ ರೌಂಡರ್ ಶಕಿಬ್ ಉಲ್ ಹಸನ್ ಅವರು ಬುಕ್ಕಿ ಜತೆಗೆ ಮಾತನಾಡಿದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಎಲ್ಲಾ ಮಾದರಿ ಕ್ರಿಕೆಟಿನಿಂದ ಎರಡು ವರ್ಷ ನಿಷೇಧ ಹೇರಿದೆ.
ಶಕಿಬ್ ಅವರು ಐಸಿಸಿ ಭ್ರಷ್ಟಾಚಾರ ತಡೆ ಸಂಹಿತೆ ಉಲ್ಲಂಘನೆಯ ಆರೋಪಗಳನ್ನು ಒಪ್ಪಿದ ಹಿನ್ನೆಲೆಯಲ್ಲಿ ಅವರಿಗೆ ನಿಷೇಧ ಹೇರಲಾಗಿದೆ. ಷರತ್ತಗಳನ್ನು ಪಾಲಿಸಿದರೆ ಒಂದು ವರ್ಷದ ಬಳಿಕ ಮರಳಬಹುದಾಗಿದೆ ಎಂದು ಐಸಿಸಿ ತಿಳಿಸಿದೆ.
ಎರಡು ವರ್ಷಗಳ ಮೊದಲು ಬುಕ್ಕಿಯೊಬ್ಬರು ತನ್ನನ್ನು ಭೇಟಿಯಾಗಿ ಆಮಿಷವೊಡ್ಡಿದ್ದ ಬಗ್ಗೆ ಶಕಿಬ್ ಐಸಿಸಿ ಭ್ರಷ್ಟಾಚಾರ ನಿಗ್ರಹ ಪಡೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದರು.