ನವದೆಹಲಿ: ಚೆನ್ನೈಯಲ್ಲಿ ಉಪನ್ಯಾಸವೊಂದನ್ನು ನೀಡುತ್ತಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಪುರುಷರು ಮದುವೆಯಾಗುವ ಮೊದಲು ಮಾತ್ರ ಸಿಂಹಗಳು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ತನ್ನ ಮದುವೆಯ ಯಶಸ್ಸು ಹಾಗೂ ಒಳ್ಳೆಯ ಗಂಡನಾಗಿರಲು ಕಾರಣವೇನೆಂದು ಅವರು ಈ ಬಗ್ಗೆ ಈ ರೀತಿಯಾಗಿ ಅವರು ವಿವರಿಸಿದ್ದಾರೆ.
ತನ್ನ ಪತ್ನಿಗೆ ಇಷ್ಟವಾಗಿರುವುದನ್ನು ಮಾಡಲು ನಾನು ಬಿಡುತ್ತೇನೆ. ಇದರಿಂದಾಗಿ ನಾನು ಒಬ್ಬ ಆದರ್ಶ ಪತಿಗಿಂತಲೂ ಮೇಲಾಗಿರುವೆನು ಮತ್ತು ಇದರಿಂದ ನಾನು ಸಂತೋಷವಾಗಿದ್ದೇನೆ. ಆಕೆಗೆ ಬೇಕಿರುವುದಕ್ಕೆ ನಾನು ಆಗಬಹುದು ಎಂದು ಹೇಳಿದ ಕೂಡಲೇ ಆಕೆ ತುಂಬಾ ಸಂತೋಷವಾಗಿರುತ್ತಾಳೆ. ಎಲ್ಲಾ ಪುರುಷರು ಮದುವೆಗೆ ಮೊದಲು ಸಿಂಹಗಳು ಎಂದು ಧೋನಿ ಹೇಳಿದ್ದಾರೆ.
50 ಅಥವಾ 55ರ ಹರೆಯವನ್ನು ದಾಟಿದ ಬಳಿಕ ಮದುವೆಯ ನಿಜವಾದ ಸತ್ವ ತಿಳಿದುಬರುವುದು. ಇದು ಪ್ರೀತಿಗೆ ನಿಜವಾದ ವಯಸ್ಸು. ಈ ವೇಳೆ ನಿಮಗೆ ದೈನಂದಿನ ಜಂಜಾಟಗಳು ಕೂಡ ಇರುವುದಿಲ್ಲ ಎಂದರು.