News Kannada
Thursday, September 29 2022

ಕ್ರೀಡೆ

ವೈಫಲ್ಯದಿಂದಾಗಿ ಆತ್ಮಹತ್ಯೆ ಆಲೋಚನೆ ಬಂದಿತ್ತು: ರಾಬಿನ್ ಉತ್ತಪ್ಪ - 1 min read

Photo Credit :

ವೈಫಲ್ಯದಿಂದಾಗಿ ಆತ್ಮಹತ್ಯೆ ಆಲೋಚನೆ ಬಂದಿತ್ತು: ರಾಬಿನ್ ಉತ್ತಪ್ಪ

ನವದೆಹಲಿ: ಕ್ರಿಕೆಟಿನಿಂದ ದೂರವಿದ್ದ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಆಲೋಚನೆಯು ಬಂದಿತ್ತು ಎಂದು ಕ್ರಿಕೆಟಿಗ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.

2007ರಲ್ಲಿ ಟಿ-20 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಉತ್ತಪ್ಪ ಅವರಿಗೆ ಬಳಿಕ ಸರಿಯಾದ ಅವಕಾಶಗಳು ಸಿಕ್ಕಿರಲಿಲ್ಲ ಮತ್ತು ಫಾರ್ಮ್ ಕೂಡ ಕಳಕೊಂಡಿದ್ದರು.

2009ರಿಂದ 2011ರ ಅವಧಿಯು ನನಗೆ ತುಂಬಾ ಕಠಿಣವಾಗಿತ್ತು. ಅನೇಲ ಸಲ ನಾನು ಖಿನ್ನತೆಗೂ ಒಳಗಾಗಿದ್ದೆ. ಆತ್ಮಹತ್ಯೆ ಆಲೋಚನೆಯು ಮೂಡಿತ್ತು ಎಂದು ಅವರು ರಾಯಲ್ಸ್ ಫೌಂಡೇಶನ್ಸ್ ಆಯೋಜಿಸಿದ್ದ ಮೈಂಡ್ ಬಾಡಿ ಆಂಡ್ ಸೋಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನೆಟ್ಸ್ ನಲ್ಲಿ ಕಠಿಣವಾಗಿ ಅಭ್ಯಾಸ ಮಾಡಿದರೂ ಪಂದ್ಯದಲ್ಲಿ ರನ್ ಮಾಡಲು ಆಗುತ್ತಿರಲಿಲ್ಲ. ಆಗ ಮನೆಯ ಬಾಲ್ಕನಿಗೆ ಹೋಗಿ ಕೆಳಗೆ ಜಿಗಿದು ಬಿಡಬೇಕು ಎಂದು ಅನಿಸಿದ್ದು ಇದೆ. ಆದರೆ ಯಾವುದೋ ಶಕ್ತಿ ತಡೆದಿರುವುದು ಇದೆ. ಬಳಿಕ ಎಲ್ಲವೂ ಸರಿಯಾಗುತ್ತಾ ಹೋಯಿತು. ಕ್ರಿಕೆಟ್ ನನಗೆ ತುಂಬಾ ನೆರವಾಗಿದೆ ಎಂದು ಅವರು ಹೇಳಿದ್ದಾರೆ.

See also  ಅಂತಿಮ ಟೆಸ್ಟ್ ನ ಎರಡನೇ ದಿನವೂ ಭಾರತದ ಪ್ರಾಬಲ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು