News Kannada
Friday, October 07 2022

ಕ್ರೀಡೆ

ರಾಷ್ಟ್ರೀಯ ಕರಾಟೆ ಅಸೋಶಿಯೇಷನ್ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ - 1 min read

Photo Credit :

ರಾಷ್ಟ್ರೀಯ ಕರಾಟೆ ಅಸೋಶಿಯೇಷನ್ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ

ಮಡಿಕೇರಿ: ರಾಷ್ಟ್ರೀಯ ಕರಾಟೆ ಅಸೋಶಿಯೇಷನ್ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ ಆಯ್ಕೆಯಾಗಿದ್ದಾರೆ.

ಕೇರಳ ಮತ್ತು ಹರ್ಯಾಣ ಹೈ ಕೋರ್ಟ್ ಆದೇಶದಂತೆ, ಭಾರತ ಸರ್ಕಾರ ಕ್ರೀಡಾ ಮಂತ್ರಾಲಯ ಮತ್ತು ಇಂಡಿಯನ್ ಒಲಪಿಂಕ್ ಅಸೋಶಿಯೇಷನ್ ಜಂಟಿ ಆಶ್ರಯದಲ್ಲಿ ಅಸ್ಸಾಂ ಹೈ ಕೋರ್ಟ್ ನಿವೃತ್ತ ನ್ಯಾಯದೀಶ ಬಿ. ಪಿ. ಬೋರ್ಕೋಟಗಿ ಅವರ ಸಮ್ಮುಖದಲ್ಲಿ ಅಸ್ಸಾಂ ರಾಜ್ಯದ ಗೌಹಟ್ಟಿಯಲ್ಲಿ ನಡೆದ ಕರಾಟೆ ರಾಷ್ಟ್ರೀಯ ಮಂಡಳಿಯ ಹಿರಿಯ ಉಪಾಧ್ಯಕ್ಷರಾಗಿ ಕರಾಟೆ ಪಟು ಅರುಣ್ ಮಾಚಯ್ಯ ಅವರನ್ನು ಆಯ್ಕೆ ಮಾಡಲಾಯಿತು.

1977 ರಲ್ಲಿ ಪ್ರಥಮ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿರುವ ಅರುಣ್ ಮಾಚಯ್ಯ ಅವರು ಕರಾಟೆಯಲ್ಲಿ ಉನ್ನತ ತರಬೇತಿಯನ್ನು ಸಿಂಗಾಪುರ್‍ನಲ್ಲಿ ಮುಗಿಸಿದರು.

ನಂತರದ ವರ್ಷಗಳಲ್ಲಿ ಇಂಡೋನೇಷ್ಯಾ ಮಲೇಷಿಯಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ಮೆಕ್ಸಿಕೋ, ನೇಪಾಳ ಹೀಗೆ ಹಲವು ವಿಶ್ವ ಮತ್ತು ಏಶಿಯನ್ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ 1989ರಲ್ಲಿ 1993ರಲ್ಲಿ ಹೆವಿವೈಟ್ ವಿಭಾಗದಲ್ಲಿ ಪದಕವನ್ನು ಗಳಿಸಿದ್ದಾರೆ.

1994ರಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಕ್ರೀಡಾಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಸ್ತುತ ಇವರು ವಿಶ್ವಕರಾಟೆ ಫೆಡರೇಷನ್ (ಡಬ್ಲ್ಯುಕೆಎಫ್) 7ನೇ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿದ್ದು, ಅಂತರಾಷ್ಟ್ರೀಯ ತೀರ್ಪುಗಾರರಾಗಿದ್ದಾರೆ. ಟರ್ಮ್ ಆಫ್ ಆಫೀಸ್ 2024ರ ವರೆಗೆ.

See also  ಕೊಹ್ಲಿ ಭರ್ಜರಿ ಶತಕ: ಟೀಂ ಇಂಡಿಯಾಗೆ ರೋಚಕ ಗೆಲುವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು