ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಯೋಗರಾಜ್ ಸಿಂಗ್ ಅವರು ಮಾಡಿದ ಟೀಕೆಗೆ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಕ್ಷಮೆಯಾಚಿಸಿ ರೈತರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಹಾರೈಸಿದ್ದಾರೆ.
ತಂದೆ ಯೋಗರಾಜ್ ಸಿಂಗ್ನಿಂದ ದೂರವಿದ್ದ 39 ವರ್ಷದ ಯುವರಾಜ್ ಸಿಂಗ್, ಎನ್ಸಿಆರ್ನಲ್ಲಿ ರೈತ ಪ್ರತಿಭಟನೆ ಕುರಿತು ತಂದೆಯ ಭಾಷಣದಿಂದ ತೀವ್ರ ದುಃಖಿತನಾಗಿದ್ದೇನೆ ಮತ್ತು ಅಸಮಾಧಾನಗೊಂಡಿದ್ದೇನೆ ಎಂದು ಹೇಳಿದ್ದಾರೆ.
ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಯುವರಾಜ್ ಸಿಂಗ್ ಹೇಳಿದ್ದು. ನಮ್ಮ ಸಮಾಜವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವುದರಿಂದ ಕೋವಿಡ್ -19 ನಂತಹ ವೈರಸ್ ಮತ್ತು ಸೋಂಕಿನ ವಿರುದ್ಧ ಅಗತ್ಯ ಮುನ್ನೆಚ್ಚರಿಕೆಗಳನ್ನು ಮುಂದುವರಿಸಬೇಕೆಂದು ಮಾಜಿ ಟೀಮ್ ಇಂಡಿಯಾ ಕ್ರಿಕೆಟಿಗ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.
ರೈತರು ನಿಸ್ಸಂದೇಹವಾಗಿ ರಾಷ್ಟ್ರದ ಜೀವನಾಡಿ ಹಾಗಾಗಿ ಶಾಂತಿಯುತ ಸಂವಾದದ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಯುವರಾಜ್ ಸಿಂಗ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಜನ್ಮದಿನವನ್ನು ಆಚರಿಸುವ ಬದಲು, ನಮ್ಮ ರೈತರು ಮತ್ತು ನಮ್ಮ ಸರ್ಕಾರದ ನಡುವೆ ನಡೆಯುತ್ತಿರುವ ಮಾತುಕತೆಗಳ ಶೀಘ್ರ ಪರಿಹಾರಕ್ಕಾಗಿ ನಾನು ಬಯಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ” ಎಂದು ಯುವರಾಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಧ್ಯರಾತ್ರಿ ಪೋಸ್ಟ್ ಮಾಡಿದ್ದಾರೆ.
ಜೊತೆಗೆ ನನ್ನ ಸಿದ್ದಾಂತ ಹಾಗೂ ನನ್ನ ತಂದೆಯ ಸಿದ್ದಾಂತ ಒಂದೇ ಆಗಿಲ್ಲ ಅವು ವಿರುದ್ದ ದಿಕ್ಕಿನವು ಎಂದಿದ್ದಾರೆ.