News Kannada
Monday, January 30 2023

ಕ್ರೀಡೆ

ಮುಲ್ಲಾಘ್ ಪದಕ ಸ್ವೀಕರಿಸಿದ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ

Photo Credit :

ಮುಲ್ಲಾಘ್ ಪದಕ ಸ್ವೀಕರಿಸಿದ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ

ಮೆಲ್ಬೋರ್ನ್: ಟೀಂ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ, ‘ಪಂದ್ಯ ಶ್ರೇಷ್ಠ ಪ್ರಶಸ್ತಿ’ ರೂಪದಲ್ಲಿ ಪ್ರತಿಷ್ಠಿತ ‘ಮುಲ್ಲಾಘ್ ಪದಕ’ ಸ್ವೀಕರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಥಮ ಇನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿ ಟೆಸ್ಟ್ ವೃತ್ತಿ ಜೀವನದ 12ನೇ ಶತಕ ಪೂರೈಸಿದ್ದ ರೆಹನಾ ಇಂದು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, “ಪ್ರತಿಷ್ಠಿತ ‘ಮುಲ್ಲಾಘ್‌ ಪದಕ’ ಸ್ವೀಕರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಟೀಮ್‌ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಪಾತ್ರರಾಗಿದ್ದಾರೆ” ಎಂದು ಸಂತೋಷದ ವಿಷಯವನ್ನು ಹಂಚಿಕೊಂಡಿದ್ದಾರೆ.

ಜಾನಿ ಮುಲ್ಲಾಘ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ 1868ರಲ್ಲಿ ಇಂಗ್ಲೆಂಡ್‌ಗೆ ಮೊಟ್ಟ ಮೊದಲ ಬಾರಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡಿತ್ತು. ಈ ನೆನಪಿನ ಗೌರವಾರ್ಥವಾಗಿ ಮಾಜಿ ನಾಯಕನ ಹೆಸರಿನಲ್ಲಿ ಈ ಪದಕ ನೀಡಲಾಗಿದೆ. ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವ ಆಟಗಾರನಿಗೆ ‘ಮುಲ್ಲಾಘ್‌ ಪದಕ’ ನೀಡಲು ಈ ಹಿಂದೆ ಕ್ರಿಕೆಟ್‌ ಆಸ್ಟ್ರೇಲಿಯಾ ನಿರ್ಧರಿಸಿತ್ತು.

See also  ಚೆಂಡು ವಿರೂಪ ಪ್ರಕರಣ: ಕೊನೆಗೂ ಬಾಯಿಬಿಟ್ಟ ಆಸೀಸ್ ಕ್ರಿಕೆಟಿಗ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು