News Kannada
Thursday, December 08 2022

ಕ್ರೀಡೆ

ಕೋಲ್ಕತ್ತಾ ಬೌಲಿಂಗ್ ದಾಳಿಗೆ ತತ್ತರಿಸಿದ ಬೆಂಗಳೂರು: 92 ರನ್​ಗಳಿಗೆ ಆಲೌಟ್

Photo Credit :

ಕೋಲ್ಕತ್ತಾ ಬೌಲಿಂಗ್ ದಾಳಿಗೆ ತತ್ತರಿಸಿದ ಬೆಂಗಳೂರು ತಂಡ ಕೇವಲ 92 ರನ್​ಗಳಿಗೆ ಆಲೌಟ್ ಆಗಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ 5ರನ್​ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದು ನಿರಾಶೆಯನುಭವಿಸದಿದರು.

ನಂತರ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಯುವ ಆಟಗಾರರಾದ ದೇವದತ್ ಪಡಿಕ್ಕಲ್(22) ಮತ್ತು ಶ್ರೀಕಾರ್​ ಭರತ್​(16) 2ನೇ ವಿಕೆಟ್​ಗೆ 31 ರನ್​ ಸೇರಿಸಿದರು. ಪಡಿಕ್ಕಲ್(22)​ ಲಾಕಿ ಫರ್ಗ್ಯುಸನ್​ ಬೌಲಿಂಗ್​ನಲ್ಲಿ ಕಾರ್ತಿಕ್​ಗೆ ಕ್ಯಾಚ್​ ನೀಡಿ ನಿರ್ಗಮಿಸುತ್ತಿದ್ದಂತೆ ಆರ್​ಸಿಬಿ ವಿಕೆಟ್ ಬೀಳಲು ಶುರುವಾಯಿತು.

ನಂತರ 16 ರನ್​ಗಳಿಸಿದ್ದ ಭರತ್​ ಗಿಲ್​ಗೆ ಕ್ಯಾಚ್​​ ನೀಡಿದರೆ, ನಂತರದ ಎಸೆತದಲ್ಲಿ ಎಬಿ ಡಿ ವಿಲಿಯರ್ಸ್ ಕ್ಲೀನ್​ ಬೌಲ್ಡ್​ ಆಗಿ ಗೋಲ್ಡನ್​ ಡಕ್​ ಆದರು. ಮ್ಯಾಕ್ಸ್​ವೆಲ್ ಕೇವಲ 10 ರನ್​ಗಳಿಸಿ​ ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ನಂತರ ಬಂದ ಹಸರಂಗ(0), ಸಚಿನ್ ಬೇಬಿ(7),ಕೈಲ್ ಜೆಮೀಸನ್(4) ಹರ್ಷಲ್ ಪಟೇಲ್ (12) ಮತ್ತು ಸಿರಾಜ್​ (8) ರನ್​ಗಳಿಸಿ ಔಟಾದರು.
ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 13ಕ್ಕೆ 3, ಆ್ಯಂಡ್ರೆ ರಸೆಲ್ 9ಕ್ಕೆ3, ಲಾಕಿ ಫರ್ಗ್ಯುಸನ್​ 24ಕ್ಕೆ 2 ಮತ್ತು ಪ್ರಸಿಧ್ ಕೃಷ್ಣ 24ಕ್ಕೆ 1 ವಿಕೆಟ್ ಪಡೆದು ಆರ್​ಸಿಬಿಯನ್ನು 100ರೊಳಗೆ ಕಟ್ಟಿಹಾಕಿದರು.

See also  ಶಿಖರ್ ಧವನ್ ದಾಖಲೆಯ ಶತಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು