News Kannada
Saturday, April 01 2023

ಕ್ರೀಡೆ

ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಬ್ಯಾಟ್ಸ್​ಮನ್ ಗಾಯಕ್ವಾಡ್!

Photo Credit :

ಋತುರಾಜ್ ಗಾಯಕ್ವಾಡ್​ ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಕೇವಲ 24 ವರ್ಷ ಮತ್ತು 257 ದಿನಗಳಲ್ಲಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಈ ದಾಖಲೆ ಆಸ್ಟ್ರೇಲಿಯಾದ ಶಾನ್ ಮಾರ್ಷ್​ ಹೆಸರಿನಲ್ಲಿತ್ತು.  ಋತುರಾಜ್ ಗಾಯಕ್ವಾಡ್​ ಕೇವಲ 16 ಇನ್ನಿಂಗ್ಸ್‌ಗಳಲ್ಲಿ 635 ರನ್ ಗಳಿಸುವ ಮೂಲಕ ಈ ವರ್ಷ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಫಾಫ್ ಡು ಪ್ಲೆಸಿಸ್ ಸ್ಥಾನ ಪಡೆದಿದ್ದಾರೆ.

ಈ ಋತುವಿನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಗಾಯಕ್ವಾಡ್​ 45.35 ಸರಾಸರಿಯಲ್ಲಿ 136.26 ರ ಉತ್ತಮ ಸ್ಟ್ರೈಕ್-ರೇಟ್ ನಲ್ಲಿ ರನ್ ಗಳಿಸಿದ್ದಾರೆ.
ಗಾಯಕ್ವಾಡ್​ 64 ಬೌಂಡರಿಗಳನ್ನು ಹೊಡೆದಿದ್ದಾರೆ. 23 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಸಿಕ್ಸರ್​ ಸಿಡಿಸಿದವರ ಪಟ್ಟಿಯಲ್ಲಿ ರಾಹುಲ್ ನಂತರದ ಸ್ಥಾನದಲ್ಲಿದ್ದರೆ, ಬೌಂಡರಿ ಸಿಡಿಸಿದವರ ಪಟ್ಟಿಯಲ್ಲಿ ಗಾಯಕ್ವಾಡ್ ಅಗ್ರಸ್ಥಾನದಲ್ಲಿದ್ದಾರೆ.

ಫಾಫ್ ಡುಪ್ಲೆಸಿ ಜೊತೆಗೆ ಉತ್ತಮ ಜೊತೆಯಾಟ ನೀಡಿರುವ ಗಾಯಕ್ವಾಡ್ 16 ಇನ್ನಿಂಗ್ಸ್​ಗಳ ಪೈಕಿ ಎರಡು ಇನ್ನಿಂಗ್ಸ್​ಗಳಲ್ಲಿ ಔಟಾದೆ ಉಳಿದಿದ್ದರು.
2021 ಐಪಿಎಲ್​ನಲ್ಲಿ ಗಾಯಕ್ವಾಡ್​ ಒಟ್ಟು 4 ಅರ್ಧಶತಕ ಮತ್ತು 1 ಶತಕ ಬಾರಿಸಿದ್ದಾರೆ. ಭವಿಷ್ಯದಲ್ಲಿ ಇವರು ಭಾರತ ತಂಡದ ಖಾಯಂ ಸದಸ್ಯರಾಗಲಿದ್ದಾರೆ ಎನ್ನಲಾಗಿದೆ.

See also  ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ: ಆಸ್ಟ್ರೇಲಿಯಾ-ಲಂಕಾ ತಂಡಗಳು ಗುರುವಾರ ಮುಖಾಮುಖಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು